ಡಿಕೆ ಶಿವಕುಮಾರ್ ನೀರಿನ ಕಳ್ಳ ; ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ; ಕೆಎಸ್ ಈಶ್ವರಪ್ಪ ಕಿಡಿ
1069 views
shivamogga ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ;ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೆಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ, ಡಿಕೆ ಶಿವಕುಮಾರ್ ನೀರಿನ ಕಳ್ಳ, ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ರೈತರಿಗೆ ಡಿಕೆ ಶಿವಕುಮಾರ್ ಮೋಸ ಮಾಡುತ್ತಿದ್ದಾರೆ. ಡಿಕೆಶಿ ಒಬ್ಬ ಅಯೋಗ್ಯ ಉಪ ಮುಖ್ಯಮಂತ್ರಿ, ಡಿಕೆಶಿ ಹೇಳೊದೊಂದು ಮಾಡೋದು ಒಂದು ಮಾಡುತ್ತಿದ್ದಾರೆ, ಅವರಿಗೆ ಲೋಕಸಭೆ ಚುನಾವಣೆ ಮಾತ್ರ ತಲೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ಸಾಕಷ್ಟು ನೀರು ಬಿಟ್ಟಿದ್ದಾರೆ, ಈಗ ಕೇಂದ್ರ ಸರ್ಕಾರಕ್ಕೆ ಹೋಗುತ್ತೇವೆ ಅಂದ್ರೆ ಹೇಗೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆ ನಡೆಯುತ್ತಿದೆ, ಕುಮಾರಸ್ವಾಮಿ ಮೈತ್ರಿ ವಿಚಾರವಾಗಿ ದೆಹಲಿಗೆ ಹೋಗುತ್ತೇನೆ ಅಂದಿದ್ರು, ಸೀಟು ಹಂಚಿಕೆ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡುತ್ತೇನೆ ಅಂದಿದ್ರು, ನಾನು ಮಾಧ್ಯಮದಲ್ಲೇ ನೋಡಿ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಡಿಸಿಎಂ ಜಟಾಪಟಿ ಬಗ್ಗೆ ಮಾತನಾಡಿದ ಅವರು, ಕೆಎನ್ ರಾಜಣ್ಣ ಡಿಸಿಎಂ ಬಗೆ ಧ್ವನಿ ಎತ್ತಿದ್ದಾರೆ, ಕೆಎನ್ ರಾಜಣ್ಣ ಯಾರು ಸಿದ್ದರಾಮಯ್ಯ ಬಣ, ಸಿದ್ದರಾಮಯ್ಯ ಚೇಲಾಗಳು, ಡಿಕೆಶಿಗೆ ಅವಮಾನ ಮಾಡಬೇಕು ಎಂಬ ಕಾರಣಕ್ಕೆ ಮೂರು ಡಿಸಿಎಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಕಿಡಿಕಾರಿದರು. ಕೆಲವರು ಡಿಸಿಎಂ ಬೇಡ ಎಂದು ವಿರೋಧಿಸುತ್ತಿದ್ದಾರೆ, ಸರ್ಕಾರದ 100 ದಿನದ ಸಾಧನೆ ಅಂದ್ರೆ ಇದೆ ನೋಡಿ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ನಲ್ಲಿ ಗುಂಪುಗಾರಿ ಶುರುವಾಗಿದೆ, ಲೋಕಸಭೆ ಚುನಾವಣೆಯ ಮೊದಲು ಅಥವಾ ನಂತ ಈ ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳಿದರು.