ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಇದೆ, ಆರೋಗ್ಯ ಗಮನಿಸಿ ಪೂರ್ಣ ಪ್ರಯತ್ನ ಮಾಡುವೆ: ಎಚ್ಡಿ ದೇವೇಗೌಡ
1136 views
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿಕುಣಿಗಲ್: ಅಯೋಧ್ಯೆಯಲ್ಲಿ ನೆರವೇರಲಿರುವ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಹೋಗಲು ಇಚ್ಛೆ ಇದೆ. ಆದರೆ, ಆರೋಗ್ಯದ ಸ್ಥಿತಿ ನೋಡಿಕೊಂಡು ಹೋಗಲು ಪೂರ್ಣ ಪ್ರಯತ್ನ ಮಾಡುವುದಾಗಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದರು.
ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಬಳಿಕ ದೇವೇಗೌಡ ಅವರು ಮಾತನಾಡಿದರು. ''ಶ್ರೀ ಬಾಲ ಮಂಜುನಾಥ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಬರಲು ಆಹ್ವಾನ ನೀಡಿದ್ದರು. ವಿದ್ಯಾ ಚೌಡೇಶ್ವರಿಯ ಉತ್ತರಾಯಣ ಪುಣ್ಯಕಾಲ ಇದು. ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ಧಂತಿ ಉತ್ಸವ ಮತ್ತು ಅಮ್ಮನವರ ಚಿಕ್ಕಮ್ಮ ಜಾತ್ರೆಯು ಶಾಸ್ತ್ರೋಕ್ತವಾಗಿ ನಡೆದಿದೆ. ನಾನು ಉಪವಾಸ ವ್ರತ ಕೈಗೊಂಡು, ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ. ನನ್ನ ಎರಡು ಮಂಡಿ ಚೆನ್ನಾಗಿಲ್ಲ, ಆದರೂ ಕೂಡ ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ'' ಎಂದು ಹೇಳಿದರು.
''ಇಲ್ಲಿ ನಡೆದಂತಹ ಹೋಮ ಅತ್ಯಂತ ವಿಶೇಷವಾಗಿತ್ತು. ಶ್ರೀ ವಿದ್ಯಾ ಚೌಡೇಶ್ವರಿ ದೇವಿಗೆ ಒಂದು ಕಿರೀಟವನ್ನು ನಾನು ಧಾರಣೆ ಮಾಡಿಸಿದ್ದೇನೆ. ಶ್ರೀ ಚೌಡೇಶ್ವರಿ ದೇವಿಯ ಶಕ್ತಿಯಿಂದಾಗಿ ಮೂರು ಬಾರಿ ನಾನು ಪ್ರದಕ್ಷಣೆ ಮಾಡಿದ್ದೇನೆ. ದೇವಿಗೆ ಧರಿಸಿದ ವಜ್ರದ ಕಿರೀಟ ದೇವಸ್ಥಾನದಿಂದಲೇ ಕೊಟ್ಟಿರುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬಂದಿದ್ದರು. ನನಗೂ ಇಲ್ಲಿ ಹೋಗುವಂತೆ ಹೇಳಿದರು, ಹಾಗಾಗಿ ಬಂದು ಪೂಜೆ ಸಲ್ಲಿಸಿದ್ದೇನೆ'' ಎಂದು ಎಚ್ಡಿ ದೇವೇಗೌಡ ಹೇಳಿದರು.