ಬೆಂಗಳೂರು ಬಂದ್ ; ಪ್ರತಿಭಟನಾಕಾರರು ಕಾನೂನು ಕೈಗೆ ತೆಗೆದುಕೊಂಡರೆ ಕ್ರಮ ; ಜಿ ಪರಮೇಶ್ವರ್
1074 views
tumakuru ವಿಡಿಯೋಗಳಿಗೆ ಚಂದಾದಾರರಾಗಿತುಮಕೂರು:ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್ಗೆ ಸಂಬಂಧಿಸಿದಂತೆ, ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ವತಿಯಿಂದ ಕಾನೂನು ರಕ್ಷಣೆ ಮಾಡಲು ಏನ್ ಮಾಡಬೇಕು ಅದನ್ನೆಲ್ಲ ನಮ್ಮ ಇಲಾಖೆ ಮಾಡಿಕೊಂಡಿದ್ದಾರೆ. ನಾನು ಅವರಿಗೆ ಮನವಿ ಮಾಡೋದು ಇಷ್ಟೇ. ಒಂದು ಬಂದ್ ಮಾಡಬೇಡಿ ಅಂತ ಹೇಳ್ತಿವಿ. ಆದರೆ ಅವರು ಮಾಡೇ ಮಾಡ್ತಾರೆ. ಆದರೂ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯಬಾರದು. ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು. ಸರ್ಕಾರಿ ಆಸ್ತಿಗಳ ನಷ್ಟ ಆಗಬಾರದು. ಕಾನೂನು ಬಾಹಿರವಾದಂತಹ ಯಾವುದೇ ಚಟುವಟಿಕೆಗಳನ್ನ ನಡೆಯಬಾರದು. ನಾನು ಅವರಲ್ಲಿ ಮನವಿ ಮಾಡ್ತೇನೆ ಎಂದು ಹೇಳಿದರು. ಪ್ರತಿಭಟನಕಾರಾರು ಕಾನೂನು ಕೈಗೆ ತೆಗೆದುಕೊಂಡ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದರು. ಈಗಾಗಲೇ ಪೊಲೀಸ್ ಇಲಾಖೆ ಅವರು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜನರ ಆಶೋತ್ತರಗಳಿಗೆ ಸರಿಯಾಗಿ ಆಡಳಿತ ಎಂದು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ನಾವು ಜನ ಪರವಾದ ಆಡಳಿತ ಕೊಡ್ತೇವೆ ಅಂತ ಹೇಳಿಕೊಂಡು ಬಂದಿದ್ದೇವೆ. ಅದೇ ರೀತಿ ನಮ್ಮ ಆಡಳಿತ ಚುರುಕಾಗಬೇಕು. ಹೆಚ್ಚಿನ ರೀತಿಯಲ್ಲಿ ಜನರಿಗೆ ಸ್ಪಂದನೆ ಮಾಡಬೇಕು ಎಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಮ್ಮ ಪಕ್ಷದಿಂದ ಪ್ರತಿಯೊಬ್ಬ ಸಚಿವರನ್ನ ಲೋಕಾಸಭಾ ಚುನಾವಣೆಗೆ ಉಸ್ತುವಾರಿ ವಹಿಸಿದ್ದಾರೆ. ನನಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಕಿದ್ದಾರೆ. ತುಮಕೂರು ಇರುತ್ತೆ ಅದರ ಜೊತೆಗೆ ಮತ್ತೊಂದು ಕ್ಷೇತ್ರ ಹಾಕಿದ್ದಾರೆ ಎಂದು ಹೇಳಿದರು, ಇನ್ನೂ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು, ನನ್ನನ್ನ ಗೌರಿಶಂಕರ್ ಭೇಟಿ ಮಾಡಿದ್ರು. ನನ್ನ ಆರೋಗ್ಯ ವಿಚಾರಿಸಿ ಚೆನ್ನಾಗಿದ್ದೀರಾ ಅಣ್ಣ ಅಂತ ಮಾತಾಡ್ಸಿ ಹೋದ್ರು. ನನ್ನ ಬಳಿ ರಾಜಕೀಯ ಚರ್ಚೆ ಮಾಡಿಲ್ಲ. ಹಾರ, ಹಣ್ಣು ಕೊಟ್ರು ಒಳ್ಳೆಯದಾಗಲಿ ಅಂತ ಹೇಳಿದ್ರು. ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.