ಉತ್ತರ ಕನ್ನಡದ ಇದೊಂದೇ ಊರಲ್ಲಿದೆ ನೂರಾರು ಅರಳಿ ಮರಗಳು!
1076 views
ಉತ್ತರ ಕನ್ನಡ ವಿಡಿಯೋಗಳಿಗೆ ಚಂದಾದಾರರಾಗಿಆಮ್ಲಜನಕದ ಉತ್ಪಾದಕವೆಂದೇ ಕರೆಯಲ್ಪಡುವ ಅರಳಿ ಮರಗಳನ್ನ ಹಿಂದೂಗಳು ಧಾರ್ಮಿಕ ಭಾವನೆಯಿಂದ ಪೂಜಿಸುತ್ತಾರೆ. ಹೀಗಾಗಿ ಅಲ್ಲಲ್ಲಿ ದೇಗುಲಗಳಲ್ಲಿ ಅಶ್ವತ್ಥ ಕಟ್ಟೆಗಳಿರುವುದು ಮಾಮೂಲಿ. ಆದರೆ ಇಲ್ಲೊಂದು ಗ್ರಾಮದ ತುಂಬೆಲ್ಲ ಅರಳಿ ಮರಗಳ ರಾಶಿಯೇ ಇದ್ದು, ಇದರಿಂದಾಗಿ ಈ ಗ್ರಾಮಕ್ಕೆ ಅಶ್ವತ್ಥ ಗ್ರಾಮ ಎಂದು ಕೂಡ ಹೆಸರು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತುಂಬಾ ಅರಳಿ ಮರಗಳಿವೆ. ಧಾರ್ಮಿಕ ಆಚರಣೆಯ ಸಂಬಂಧ ಪೂರ್ವಜರು ಪ್ರತಿ ಮನೆಗಳ ಬಳಿ ನೆಟ್ಟ ಈ ಮರಗಳು ಅರಳಿ ವನವನ್ನಾಗಿಸಿ ಪರಿಶುದ್ಧ ವಾತಾವರಣ ನಿರ್ಮಾಣವಾಗಲು ಸಹಾಯಕಾರಿಯಾಗಿದೆ. ಗ್ರಾಮದ ಪ್ರತಿ ಕಿಮೀ.ಗೆ 60ರಿಂದ 70, ಅರಳಿ ಮರಗಳು ಕಾಣಸಿಗುತ್ತವೆ.