ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಪದ ಕೊಡ ತುಂಬಿದೆ ; ಯತ್ನಾಳ್ ವಿರುದ್ಧ ನಿರಾಣಿ ವಾಗ್ದಾಳಿ
1067 views
vijayapura ವಿಡಿಯೋಗಳಿಗೆ ಚಂದಾದಾರರಾಗಿವಿಜಯಪುರ:ಯತ್ನಾಳ್ ಹೇಳಿಕೆ ಮತ್ತು ವರ್ತನೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗಿದ್ದು, ಅವರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಕಿಡಿ ಕಾರಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂದಿನ ಸಂಸದ ವಿಜಯ ಸಂಕೇಶ್ವರ ಅವರು ಕಾರ್ಯ ಬಾಹುಳ್ಯದಿಂದಾಗಿ ಸಚಿವ ಸ್ಥಾನ ಒಪ್ಪಿರಲಿಲ್ಲ. ಅವರ ತ್ಯಾಗ ಮತ್ತು ಸಲಹೆಯಂತೆ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಶಿಫಾರಸು ಮಾಡಿದ್ದರಿಂದ ಯತ್ನಾಳ ಅವರು ಕೇಂದ್ರ ಸಚಿವರಾಗಿದ್ದರು. ಜವಳಿ ಮತ್ತು ರೇಲ್ವೆ ಸಚಿವರಾಗಿದ್ದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಮುರುಗೇಶ ನಿರಾಣಿ ಕಿಡಿ ಕಾರಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಪತನವಾಗುವ ವೇಳೆ ಇದೇ ಯತ್ನಾಳ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದರು. ಆದರೆ, ಅಂದು ಬಿಜೆಪಿ ಮುಖಂಡ ಅನಂತಕುಮಾರ ಅವರು ಇವರನ್ನು ತಡೆದಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಜೆಡಿಎಸ್ ಸೇರಿದ್ದರು ಆಗ ಅವರು ಟೋಪಿ ಹಾಕಿಕೊಂಡು ನಮಾಜ್ ಮಾಡಿದ್ದರು. ಈಗ ಹಿಂದೂ ಹುಲಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಟೀಕಿಸಿದರು.
ಇದೇ ವೇಳೆ, ಈ ಹಿಂದೆ ಶಾಸಕ ಯತ್ನಾಳ ಅವರು ಬಿಜೆಪಿಯಲ್ಲಿ ರೂ. 2500 ಕೋಟಿ ಕೊಟ್ಟರೆ ಸಿಎಂ, ಮಂತ್ರಿ ಮಾಡಲು 100 ಕೋಟಿ ರೂ. 10-25 ಕೋಟಿ ಕೊಟ್ಟವರಿಗೆ ನಿಗಮ ಮಂಡಳಿ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈಗ ಮತ್ತದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಡ್ಯಾಮೇಜ್ ಆಗಿದೆ ಎಂದು ಮಾಜಿ ಸಚಿವರು ಆರೋಪಿಸಿದರು.