ಅಂತಾರಾಜ್ಯ ಜಲ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ಪರಿಹಾರ ಸರಳ: ಶಿವಾನಂದ ಪಾಟೀಲ
1056 views
vijayapura ವಿಡಿಯೋಗಳಿಗೆ ಚಂದಾದಾರರಾಗಿವಿಜಯಪುರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಶಿವಾನಂದ್ ಪಾಟೀಲ್, ''ಈ ವಿಚಾರದ ಕುರಿತು ಈಗಾಗಲೇ ದೆಹಲಿಯಲ್ಲಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕಾವೇರಿ ನೀರು ಬಿಡುವ ವಿಚಾರವನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಕಾವೇರಿ ಜಲ ವಿವಾದ ನಿಭಾಯಿಸದಿದ್ದರೆ ಈ ಹಿಂದೆ ಎಸ್ಎಂ ಕೃಷ್ಣ ಅವರ ಸರ್ಕಾರದಲ್ಲಿ ಏನಾಗಿತ್ತು ಎಂಬುದು ನಮಗೆಲ್ಲ ಗೊತ್ತಿದೆ'' ಎಂದರು.
''ಕೋರ್ಟ್ನಲ್ಲಿ ಯಾವ ವ್ಯಾಜ್ಯ ಮುಗಿದಿದೆ ಹೇಳಿ'' ಎಂದು ಪ್ರಶ್ನೆ ಮಾಡಿದ ಸಚಿವ ಶಿವಾನಂದ ಪಾಟೀಲ್, ಜಲ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದ್ದರೆ ಈ ರಾಜ್ಯಗಳ ವ್ಯಾಜ್ಯಗಳು ಇಷ್ಟು ದಿನ ನಡೆಯುತ್ತಿರಲಿಲ್ಲ. ಹಿಂದೆ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿತ್ತು, ಈಗಾ ಯಾಕೆ ಇಲ್ಲಾ? ನಾವು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಜೊತೆ ಹೋರಾಟ ಮಾಡಬೇಕಾಗಿದೆ. ಅಂತರಾಜ್ಯ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ಈ ಸಮಸ್ಯೆ ಬಗೆಹರಿಯಲು ಸರಳವಾಗುತ್ತದೆ. ಜಲ ವಿವಾದದ ವ್ಯಾಜ್ಯಗಳು ಹಾಗೇ ಮುಂದುವರಿದರೆ, ಆಯಾ ರಾಜ್ಯಗಳಿಗೆ ಹಾಗೂ ಜನರಿಗೆ ಹಾನಿಯಾಗುತ್ತದೆ ಎಂದರು.