ಮೂರು ಡಿಸಿಎಂಗಳ ಅವಶ್ಯಕತೆ ಇಲ್ಲ, ಸಿಎಂ ಸಿದ್ದರಾಮಯ್ಯ ಸಮರ್ಥರಿದ್ದಾರೆ ; ಶಿವಾನಂದ ಪಾಟೀಲ್
1084 views
vijayapura ವಿಡಿಯೋಗಳಿಗೆ ಚಂದಾದಾರರಾಗಿವಿಜಯಪುರ:ರಾಜ್ಯಕ್ಕೆ ಮೂರು ಡಿಸಿಎಂಗಳ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಉಪಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಹೈಕಮಾಂಡ್ ನಿರ್ಣಯ ಮಾಡಿದರೆ ಅದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಈ ಸಧ್ಯಕ್ಕೆ ಹೊಸದಾಗಿ ಡಿಸಿಎಂಗಳ ಅವಶ್ಯಕತೆ ಇಲ್ಲ. ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ ಎಂದು ಹೇಳಿದರು. ಸಾಮಾಜಿಕ ನ್ಯಾಯ ಒದಗಿಸಲು ಡಿಸಿಎಂಗಳ ಬೇಡಿಕೆ ಇಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ನ್ಯಾಯದಡಿ ಉಪಮುಖ್ಯಮಂತ್ರಿ ಮಾಡದಿದ್ದರೆ ನ್ಯಾಯ ಸಿಗುವುದಿಲ್ಲವೇ?, ಆ ಪರಂಪರೆ ಕರ್ನಾಟಕದಲ್ಲಿ ಬಹಳ ಕಡಿಮೆಯಿತ್ತು. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿಗೆ ಮಾಡಿದ್ದರು. ಈಗ ಆ ವಿಚಾರ ಹೈಕಮಾಂಡ್ಗೆ ಸಂಬಂಧಿಸಿದೆ. ನನಗೆ ಆ ರೀತಿ ವರ್ತಮಾನ ಎಲ್ಲಿಯೂ ಬಂದಿಲ್ಲ. ನಿಮಗೆ ಎಲ್ಲಿಯಾದರೂ ಬಂದಿದ್ದರೆ ಸಾಕ್ಷಿ ಸಮೇತ ಹೇಳಿದರೆ ನೋಡೋಣ ಎಂದು ಸಚಿವರು ಹೇಳಿದರು.
ಈಗಾಗಲೇ ಈ ಕುರಿತು ನೀರಾವರಿ ಸಚಿವರು, ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಸಮರ್ಥವಾಗಿ ನಿರ್ವಹಣೆ ಮಾಡದಿದ್ದರೆ ಏನು ಪರಿಸ್ಥಿತಿ ಉಂಟಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಎಸ್. ಎಂ. ಕೃಷ್ಣಾ ಅವರ ಸರಕಾರ ಇದ್ದಾಗ ಏನಾಗಿದೆ ಎಂಬುದು ನಮ್ಮೆಲ್ಲರಿಗೂ ಗಮನಕ್ಕಿದೆ. ಅದನ್ನು ಮುಂದಾಲೋಚನೆಯಲ್ಲಿ ಇಟ್ಟುಕೊಂಡು ನ್ಯಾಯಾಲಯಕ್ಕೂ ಮಾನ್ಯತೆ ಕೊಡಬೇಕು. ರೈತರ ಹಿತ ಕೂಡ ಕಾಪಾಡಬೇಕು ಎಂದು ಅವರು ತಿಳಿಸಿದರು.