'ಪರಿವಾರ ಉಳಿಸಿಕೋ, ಅದಕ್ಕಾಗಿ ಭ್ರಷ್ಟಾಚಾರ ಹೆಚ್ಚಿಸಿಕೋ'-ವಿಪಕ್ಷಗಳು ಮಾಡುತ್ತಿರುವುದು ಇದನ್ನೇ: ನರೇಂದ್ರ ಮೋದಿ
1038 views
lok sabha elections ವಿಡಿಯೋಗಳಿಗೆ ಚಂದಾದಾರರಾಗಿನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ (ಎನ್ಐಟಿಬಿ) ಉದ್ಘಾಟನೆಯ ನಂತರ ವರ್ಚುವಲ್ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ವೈಯಕ್ತಿಕ ಲಾಭಗಳಲ್ಲಿ ಮಾತ್ರ ಆಸಕ್ತಿ ಹೊಂದಿವೆ ಎಂದು ಟೀಕಿಸಿದರು.
ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭ್ರಷ್ಟರು ಸಭೆ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳ ಧ್ಯೇಯವಾಕ್ಯ ಕುಟುಂಬ ಮೊದಲು ರಾಷ್ಟ್ರ ಏನೂ ಅಲ್ಲ ಎಂದರು. ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಂದ, ಜನರಿಗಾಗಿ. ಆದರೆ ಪ್ರತಿಪಕ್ಷಗಳ ಮಂತ್ರ - ಕುಟುಂಬ, ಕುಟುಂಬದಿಂದ, ಕುಟುಂಬಕ್ಕಾಗಿ ಎಂದು ಲೇವಡಿ ಮಾಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಣತಂತ್ರ ರೂಪಿಸಲು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸಭೆ ನಡೆಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಟೀಕಾ ಪ್ರಹಾರ ಮುಂದುವರೆಸಿದ್ದಾರೆ. 'ಇದು ಭ್ರಷ್ಟರ ಕೂಟ. ನಮ್ಮ ಸರ್ಕಾರ, ಹಳೆಯ ಸರ್ಕಾರದ ತಪ್ಪುಗಳನ್ನು ಸರಿಪಡಿಸಿದೆ. ದೇಶದ ಬಡವರ ಮಕ್ಕಳ ಅಭಿವೃದ್ಧಿಯ ಬಗ್ಗೆ ವಿರೋಧ ಪಕ್ಷಗಳಿಗೆ ಕಾಳಜಿ ಇಲ್ಲ. ಅವರ ಕುಟುಂಬಕ್ಕೆ ಭ್ರಷ್ಟಾಚಾರವನ್ನು ಹೆಚ್ಚಿಸುವುದು ಅವರ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಾಗಿದೆ' ಎಂದು ಟೀಕಿಸಿದರು.