ಮುಂದಿನ ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರ ಮಾಡ್ತಾರಾ ನಟ ಸಲ್ಮಾನ್ ಖಾನ್?
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಈಚೆಗೆ ಬಿಗ್ ಬಾಸ್ ಓಟಿಟಿ ಶೋ ಮುಗಿಸಿರುವ ನಟ ಸಲ್ಮಾನ್ ಖಾನ್ ಅವರು 'ಟೈಗರ್ 3' ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಆಕ್ಟ್ ಮಾಡಿರೋ ಈಚೆಗಿನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಮೋಡಿ ಮಾಡಿಲ್ಲ. ಹಾಗಾಗಿ 'ಟೈಗರ್ 3' ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಮಧ್ಯೆ ಸಲ್ಮಾಣ್ ಖಾನ್ ಅವರ ಮುಂದಿನ ಸಿನಿಮಾಗಳ ಮೇಲೂ ಫ್ಯಾನ್ಸ್ಗೆ ಸಾಕಷ್ಟು ಕುತೂಹಲವಿದೆ. ಸದ್ಯ ಸಲ್ಮಾನ್ ಖಾನ್ ಅವರು ಬಾಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಇದ್ದಕ್ಕಿದ್ದಂತೆಯೇ ಈ ರೀತಿಯ ಸ್ಟೈಲ್ಗೆ ಮೊರೆ ಹೋಗಿದ್ದೇಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆದರೆ ಅದಕ್ಕಿನ್ನೂ ನಿಖರವಾದ ಕಾರಣ ಗೊತ್ತಾಗಿಲ್ಲ. ಅಲ್ಲದೆ, ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಆರ್ಮಿ ಆಫೀಸರ್ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಸಿದ್ದಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ಕಾಂಬಿನೇಷನ್ನಲ್ಲಿ 'ಶೇರ್ಷಾ' ಸಿನಿಮಾ ಮಾಡಿದ್ದ ವಿಷ್ಣುವರ್ಧನ್ ಅವರೇ ಈಗ ಕರಣ್ ಜೋಹರ್ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ನ ಸಿನಿಮಾಗೆ ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾಗಿದೆ.