ಅಭಿಮಾನಿಗಳ ಆಸೆಯನ್ನು ಕೊನೆಗೂ ಪೂರೈಸಿದ ನಟಿ ರಶ್ಮಿಕಾ ಮಂದಣ್ಣ
1188 views
entertainment ವಿಡಿಯೋಗಳಿಗೆ ಚಂದಾದಾರರಾಗಿಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಈಗ ಬಾಲಿವುಡ್ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಲಿವುಡ್ನ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಮಂದಣ್ಣ ಹಾಜರಿ ಹಾಕುತ್ತಿದ್ದಾರೆ. ಅನಿಲ್ ಅಂಬಾನಿಯಿಂದ ಹಿಡಿದು ಮನೀಷ್ ಮಲ್ಹೋತ್ರ, ಕರಣ್ ಜೋಹರ್ ಅವರ ಮನೆಯ ಸಮಾರಂಭಗಳಲ್ಲಿ ಭಾಗಿಯಾಗೋದು ಸಣ್ಣ ವಿಷಯವೇ!ಈಗ ಅವರು ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಆಗ ಅವರ ಬೌನ್ಸರ್ಸ್ ಅಭಿಮಾನಿಗಳನ್ನು ತಡೆದಿದ್ದಾರೆ. ರಶ್ಮಿಕಾ ಮಂದಣ್ಣ ಬೌನ್ಸರ್ಸ್ಗಳನ್ನು ತಡೆದು ಫ್ಯಾನ್ಸ್ಗೆ ಸೆಲ್ಫಿ ನೀಡಿದ್ದಾರೆ.ರಶ್ಮಿಕಾ ಮಂದಣ್ಣ ಅವರು 'ಪುಷ್ಪ 2' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಅಂದಹಾಗೆ ರಣಬೀರ್ ಕಪೂರ್ ಜೊತೆಗೆ 'ಅನಿಮಲ್' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇನ್ನು ಕೆಲ ಸಿನಿಮಾಗಳನ್ನು ರಶ್ಮಿಕಾ ಒಪ್ಪಿಕೊಂಡಿದ್ರೂ ಕೂಡ ಡೇಟ್ ಸಮಸ್ಯೆಯಿಂದ ನಟಿಸಲು ಕೂಡ ಸಾಧ್ಯ ಆಗುತ್ತಿಲ್ಲ, ಅಷ್ಟು ಬ್ಯುಸಿ ಕೊಡಗಿನ ಕುವರಿ.
ಛೇ, ಮುಕೇಶ್ ಅಂಬಾನಿ ಮನೆಯಲ್ಲಿ ರಶ್ಮಿಕಾಗೆ ಇದೆಂಥಾ ಅವಮಾನ? 'ಆ ಬಾಲಿವುಡ್ ನಟಿ' ಮೇಲೆ ಫ್ಯಾನ್ಸ್ ಗರಂ!
ಛೇ, ಮುಕೇಶ್ ಅಂಬಾನಿ ಮನೆಯಲ್ಲಿ ರಶ್ಮಿಕಾಗೆ ಇದೆಂಥಾ ಅವಮಾನ? 'ಆ ಬಾಲಿವುಡ್ ನಟಿ' ಮೇಲೆ ಫ್ಯಾನ್ಸ್ ಗರಂ!