Alia Bhatt: ಮಗಳು ರಹಾ ಹುಟ್ಟಿದ ಬಳಿಕ ಇನ್ನಷ್ಟು ಚೆಂದ ಕಾಣ್ತಿರುವ ಆಲಿಯಾ ಭಟ್
1579 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬ್ರೆಜಿಲ್ನಲ್ಲಿ ನಡೆಯಲಿರುವ 'Netflix Tudum 2023' ಇವೆಂಟ್ನಲ್ಲಿ ಆಲಿಯಾ ಭಟ್ ಅವರು ಭಾಗವಹಿಸಲಿದ್ದಾರೆ. ಹೀಗಾಗಿ ಅವರು ಮುಂಬೈ ಏರ್ಪೋರ್ಟ್ನಿಂದ ಬ್ರೆಜಿಲ್ಗೆ ಹಾರಿದ್ದಾರೆ. ಆಲಿಯಾ ಭಟ್ ಅವರು ಹೆಣ್ಣು ಮಗುವಿನ ತಾಯಿಯಾಗಿದ್ದು, ಇಷ್ಟೊಂದು ಫಿಟ್ನೆಸ್ ಹೊಂದಿರೋದು ನೋಡಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. 2022ರ ಏಪ್ರಿಲ್ನಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ಮದುವೆಯಾಗಿದ್ದ ಆಲಿಯಾ ಅವರು ಆ ನಂತರ ನವೆಂಬರ್ 6 ರಂದು ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾದ ಆಲಿಯಾ ಭಟ್ ಅವರು ಯೋಗ, ವರ್ಕೌಟ್ ಎಂದು ಫಿಟ್ನೆಸ್ನತ್ತ ಗಮನ ಹರಿಸಲು ಆರಂಭಿಸಿದರು. ಈಗ ಮಗುವಿನ ತಾಯಿ ಅಂದ್ರೆ ನಂಬಲಾರದಷ್ಟು ತೂಕ ಕಳೆದುಕೊಂಡಿರುವ ಆಲಿಯಾ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ.ಮಗು ರಹಾಳಿಗೂ ಸಮಯ ಕೊಡುತ್ತ ಆಲಿಯಾ ಅವರು ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ರಣಬೀರ್ ಕಪೂರ್ ಕೂಡ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿ ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರಂತೆ.
Met Gala 2023: 1 ಲಕ್ಷ ಬಿಳಿ ಮುತ್ತಿನ ಡ್ರೆಸ್ ಧರಿಸಿದ ಆಲಿಯಾ ಭಟ್, 204 ಕೋಟಿ ರೂಪಾಯಿಯ ನೆಕ್ಲೇಸ್ನಲ್ಲಿ ಪ್ರಿಯಾಂಕಾ ಚೋಪ್ರಾ
Met Gala 2023: 1 ಲಕ್ಷ ಬಿಳಿ ಮುತ್ತಿನ ಡ್ರೆಸ್ ಧರಿಸಿದ ಆಲಿಯಾ ಭಟ್, 204 ಕೋಟಿ ರೂಪಾಯಿಯ ನೆಕ್ಲೇಸ್ನಲ್ಲಿ ಪ್ರಿಯಾಂಕಾ ಚೋಪ್ರಾ