'ಲಕ್ಷ್ಮೀ ಬಾರಮ್ಮ' ಕೀರ್ತಿ ಪಾತ್ರಧಾರಿ ತನ್ವಿ ರಾವ್ರನ್ನು ಹೊಗಳಿದ್ದ ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರಕ್ಕೆ ನಟಿ ತನ್ವಿ ರಾವ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಮಂಗಳೂರಿನ ತನ್ವಿ ರಾವ್ ಅವರು ಮೂಲತಃ ಡ್ಯಾನ್ಸರ್. ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಮೇಲೆ ಒಲವು ಇಟ್ಟುಕೊಂಡಿದ್ದ ತನ್ವಿ ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.ತನ್ವಿ ರಾವ್ ಅವರಿಗೆ ಮಾಧುರಿ ದೀಕ್ಷಿತ್ ಎಂದರೆ ತುಂಬ ಇಷ್ಟ. ಮಾಧುರಿ ದೀಕ್ಷಿತ್ ಅವರ 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿ ತನ್ವಿ ರಾವ್ ನಟಿಸಿದ್ದರು. ಬಾಲ್ಯ ಹೇಗಿತ್ತು? ಡ್ಯಾನ್ಸ್ ಮೇಲಿನ ಒಲವು, ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದು, ಐಶ್ವರ್ಯಾ ರೈ ಹೊಗಳಿದ್ದು ಹೀಗೆ ನಾನಾ ವಿಚಾರಗಳ ಬಗ್ಗೆ ತನ್ವಿ ರಾವ್ ಅವರು 'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ್ದಾರೆ.ತನ್ವಿ ರಾವ್ ಅವರು ಈ ಹಿಂದೆ ನಟಿಸಿದ್ದ ಧಾರಾವಾಹಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಒಟ್ಟಾರೆಯಾಗಿ ತನ್ವಿ ರಾವ್ ಅವರ ಲೈಫ್ ಜರ್ನಿ ಇಲ್ಲಿದೆ.
Actress Tanvi Rao: ನನ್ನ ಕಣ್ಣು ನನಗೆ ವರವೂ ಹೌದು, ಶಾಪವೂ ಹೌದು: 'ಲಕ್ಷ್ಮೀ ಬಾರಮ್ಮ' ನಟಿ ತನ್ವಿ ರಾವ್
Actress Tanvi Rao: ನನ್ನ ಕಣ್ಣು ನನಗೆ ವರವೂ ಹೌದು, ಶಾಪವೂ ಹೌದು: 'ಲಕ್ಷ್ಮೀ ಬಾರಮ್ಮ' ನಟಿ ತನ್ವಿ ರಾವ್