ಆಕ್ಟಿವ್ ವೇರ್ ಲುಕ್ನಲ್ಲಿ ಸಖತ್ತಾಗಿ ಪೋಸ್ ಕೊಟ್ಟ ಅಕ್ಷಯ್ ಕುಮಾರ್
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮದೇ ಆದ ಕ್ಲೋಥಿಂಗ್ ಬ್ರ್ಯಾಂಡ್ ಹೊಂದಿದ್ದಾರೆ. ‘ಫೋರ್ಸ್ IX’ ಹೆಸರಿನಲ್ಲಿ ಸ್ಟೋರ್ಗಳನ್ನ ಸ್ಥಾಪಿಸಿದ್ದಾರೆ ಅಕ್ಷಯ್ ಕುಮಾರ್. ಇತ್ತೀಚೆಗಷ್ಟೇ ಮುಂಬೈನಲ್ಲಿ ‘ಫೋರ್ಸ್ IX’ ಹೊಸ ಸ್ಟೋರ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸ್ಟೋರ್ ಲಾಂಚ್ ಮಾಡಿ, ಆಕ್ಟೀವ್ ವೇರ್ನಲ್ಲಿ ಅಕ್ಷಯ್ ಕುಮಾರ್ ಪಾಪರಾಜಿಗಳಿಗೆ ಸಖತ್ತಾಗಿ ಪೋಸ್ ನೀಡಿದರು. ಅಕ್ಷಯ್ ಕುಮಾರ್ ಅವರ ಎನರ್ಜಿ ಹಾಗೂ ಪೋಸ್ ಕಂಡ ಛಾಯಾಗ್ರಾಹಕರು ‘ವಾಹ್.. ಕ್ಯಾ ಬಾತ್ ಹೈ’ ಎಂದು ಉದ್ಗರಿಸಿದರು. ಅಂದ್ಹಾಗೆ, ಬಾಲಿವುಡ್ನಲ್ಲಿ ಅದಾ ಬಿಜಿಯಾಗಿರುವ ನಟರ ಪೈಕಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಸದ್ಯ ಅಕ್ಷಯ್ ಕುಮಾರ್ ಕೈಯಲ್ಲಿ ‘ಸೂರರೈ ಪೋಟ್ರು’ ಚಿತ್ರದ ರೀಮೇಕ್, ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’, ‘ಬಡೇ ಮಿಯಾ ಚೋಟೇ ಮಿಯಾ’, ‘ಜಾಲಿ ಎಲ್ಎಲ್ಬಿ 3’, ‘ಹೇರಾ ಪೇರಿ 3’ ಚಿತ್ರಗಳಿವೆ.