ಮೈಸೂರಿನ ಡಾ ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾ ಶುರು
4454 views
entertainment ವಿಡಿಯೋಗಳಿಗೆ ಚಂದಾದಾರರಾಗಿಸ್ಯಾಂಡಲ್ವುಡ್ ನಟ ಅನಿರುದ್ಧ್ ಜತ್ಕರ್ ಅಭಿನಯದ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆಯು ಮೈಸೂರಿನ ಡಾ ವಿಷ್ಣುವರ್ಧನ್ ಸ್ಮಾರಕದಲ್ಲಿ ನೆರವೇರಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಈ ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ವಿಜಯ್ ರಾಘವೇಂದ್ರ ನಟಿಸಿದ್ದ 'ರಾಘು' ಚಿತ್ರದ ಮೂಲಕ ನಿರ್ದೇಶಕರಾದ ಎಂ ಆನಂದರಾಜ್ ನಿರ್ದೇಶನದಲ್ಲಿ ಅನಿರುದ್ಧ್ ಅವರ ಈ ಹೊಸ ಚಿತ್ರ ಮೂಡಿಬರಲಿದೆ. ಇದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಕಥೆಯನ್ನು ಹೊಂದಿದೆಯಂತೆ. ಆಗಸ್ಟ್ 10ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ನಡೆಯಲಿದೆ. ರೂಪ ಡಿ ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಂದ್ ರಾಜ್ ಬರೆದ ಕಥೆಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣವಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ ಇದೆ. ಈ ಚಿತ್ರದಲ್ಲಿ ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ 'ಲವ್ ಮಾಕ್ಟೇಲ್ 2'ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಉಳಿದಂತೆ, ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್, ಶಿವಮಣಿ ಮುಂತಾದವರು ನಟಿಸುತ್ತಿದ್ದಾರೆ.