ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅರಸೀಕೆರೆ MLA ಶಿವಲಿಂಗೇಗೌಡ; ಯಾವ ಸಿನಿಮಾ? ಏನು ಪಾತ್ರ?
1606 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಮೂರು ಬಾರಿ ಶಾಸಕರಾಗಿರುವ ಅರಸೀಕೆರೆಯ ಶಿವಲಿಂಗೇಗೌಡರಿಗೆ ಜೆಡಿಎಸ್ ಪಕ್ಷದಲ್ಲಿದ್ದಾಗಲೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಕೂಡ ಮಂತ್ರಿಯಾಗಿಲ್ಲ. ಆದರೆ ಈಗ ಅವರೀಗ ಏಕಾಏಕಿ ಸಿಎಂ ಆಗಿಬಿಟ್ಟಿದ್ದಾರೆ. ಅರೇ, ಶಿವಲಿಂಗೇಗೌಡ್ರು ಮುಖ್ಯಮಂತ್ರಿ ಆಗ್ಬುಟ್ರಾ ಅಂತ ಅಚ್ಚರಿಪಡಬೇಡಿ. ಅವರು ಸಿಎಂ ಆಗಿರುವುದು ನಿಜಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ!ಹೌದು, ತಮ್ಮ ಮಾತುಗಳ ಮೂಲಕ ಸದ್ದು ಮಾಡಿರುವ ಶಿವಲಿಂಗೇಗೌಡ ಅವರು ಅರಸೀಕೆರೆ ಕ್ಷೇತ್ರದಿಂದ ಸತತ ಮೂರಿ ಬಾರಿ ಎಂಎಲ್ಎ ಆಗಿದ್ದಾರೆ. ಇದೀಗ ರೀಲ್ನಲ್ಲಿ ಸಿಎಂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜೇನುಕಲ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಕೃಷ್ಣ ಬೆಳ್ತಂಗಡಿ ನಿರ್ದೇಶನದ 'ಇದು ನಮ್ಮ ಶಾಲೆ' ಎಂಬ ಚಿತ್ರದಲ್ಲಿ ಶಿವಲಿಂಗೇಗೌಡರು ಮುಖ್ಯಮಂತ್ರಿ ಪಾತ್ರ ಮಾಡಿದ್ದಾರೆ. ಅರಸೀಕೆರೆಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಮತ್ತು ಆ ಶಾಲೆಗಳ ಮಕ್ಕಳ ವಿದ್ಯಾಭ್ಯಾಸದ ಕುರಿತ ಕಥೆ ಇದೆ ಎನ್ನಲಾಗಿದೆ.