ಬಿಗ್ ಬಾಸ್ ಮನೆಯಲ್ಲಿ ಯಾರೂ ನನ್ನನ್ನ ಕೆಣಕಿಲ್ಲ, ಕೆಣಕಿದ್ರೆ ಮಾತ್ರ.. : ರಕ್ಷಕ್ ಬುಲೆಟ್
2709 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಬಿಗ್ ಬಾಸ್ ಕನ್ನಡ ಸೀಸನ್ 10' ಶೋನಿಂದ ರಕ್ಷಕ್ ಅವರು ನಾಲ್ಕನೇ ವಾರ ಎಲಿಮಿನೇಟ್ ಆಗಿ ಹೊರಗಡೆ ಬಂದಿದ್ದಾರೆ. ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದರು. ಹಾಗಾಗಿ ದೊಡ್ಮನೆಯಲ್ಲಿಯೂ ಅವರು ಸೌಂಡ್ ಮಾಡ್ತಾರೆ ಎನ್ನಲಾಗಿತ್ತು. ಆದರೆ.. ಆಗಿದ್ದೇ ಬೇರೆ....ಬಿಗ್ ಬಾಸ್ ಮನೆಗೆ ಹೋಗಲು ಆಯ್ಕೆ ಆಗಿದ್ದು ಯಾಕೆ? ಬಿಗ್ ಬಾಸ್ ಮನೆಯ ಅನುಭವ ಹೇಗಿತ್ತು? ಯಾಕೆ ರಕ್ಷಕ್ ಅವರ ಬುಲೆಟ್ ಬಿಗ್ ಬಾಸ್ ಮನೆಯಲ್ಲಿ ಸೌಂಡ್ ಮಾಡಲಿಲ್ಲ? ಡ್ರೋನ್ ಪ್ರತಾಪ್ ಬಗ್ಗೆ ಇರುವ ಅಭಿಪ್ರಾಯ ಏನು? ಯಾರು ಗೆಲ್ಲಬೇಕು? ಎಂಬ ಪ್ರಶ್ನೆಗಳಿಗೆ ರಕ್ಷಕ್ ಅವರು 'ವಿಜಯ ಕರ್ನಾಟಕ ವೆಬ್' ಜೊತೆಗೆ ಮಾತನಾಡಿದ್ದಾರೆ.ರಕ್ಷಕ್ ಅವರು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಸೆಯಲ್ಲಿದ್ದಾರೆ. ಇದರತ್ತೆ ಹೆಚ್ಚಿನ ಗಮನವನ್ನು ನೀಡಲಿದ್ದಾರೆ. ಅಂದಹಾಗೆ "ನಾನು ಮೊದಲ ಬಾರಿಗೆ ನಾಮಿನೇಟ್ ಆದೆ, ಹಾಗೆಯೇ ಹೊರಗಡೆ ಬಂದೆ. ಇದು ನನಗೆ ಶಾಕ್ ವಿಚಾರ" ಎಂದು ರಕ್ಷಕ್ ಹೇಳಿದ್ದಾರೆ.