'Bigg Boss Kannada 10' ಶೋ ಸ್ಪರ್ಧಿಗಳು ಯಾರು ಯಾರು?
1869 views
entertainment ವಿಡಿಯೋಗಳಿಗೆ ಚಂದಾದಾರರಾಗಿಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಶುರುವಾಗಲಿದೆ ಎನ್ನಲಾಗುತ್ತಿದೆ. ಈ ಬಾರಿ ಒಟಿಟಿ ಇರೋದಿಲ್ಲ, ನೇರವಾಗಿ ಟಿವಿ ಸೀಸನ್ ಆರಂಭ ಆಗುವುದು. ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಸಲುವಾಗಿ ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಇನ್ನೇನು ಕೆಲ ದಿನಗಳಲ್ಲಿ ಪ್ರೋಮೋ ಕೂಡ ಹೊರಬರುವುದು.ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ? ಯಾರೆಲ್ಲ ಬಿಗ್ ಬಾಸ್ ಶೋಗೆ ಬರಲಿದ್ದಾರೆ ಎಂಬ ಕುತೂಹಲ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಾರು ಬಿಗ್ ಬಾಸ್ ಶೋಗೆ ಬಂದರೆ ಚೆನ್ನಾಗಿರುತ್ತದೆ? ಯಾರು ಬಿಗ್ ಬಾಸ್ ಶೋಗೆ ಬರಬಹುದು ಎಂಬೆಲ್ಲ ಚರ್ಚೆಗಳು ಈಗಾಗಲೇ ಶುರುವಾಗಿವೆ. ಇನ್ನು ಕಿಚ್ಚ ಸುದೀಪ್ ಅವರೇ ಈ ಶೋನ ನಿರೂಪಣೆ ಮಾಡಲಿದ್ದಾರೆ.ಗಿಚ್ಚಿ ಗಿಲಿಗಿಲಿ ಶೋ, ಗಾಯಕರು, ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ವಾಹಿನಿಗಳ ಧಾರಾವಾಹಿಯಲ್ಲಿ ನಟಿಸಿದವರು, ಸೂಪರ್ ಹಿಟ್ ಧಾರಾವಾಹಿ ಕೊಟ್ಟು ಮುಂದಿನ ಪ್ರಾಜೆಕ್ಟ್ ಏನು ಎಂದು ಇನ್ನೂ ಅನೌನ್ಸ್ ಮಾಡದೆ ಇರುವವರು, ರಾಜಕಾರಣಿಗಳು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವವರು, ಯುಟ್ಯೂಬರ್ಸ್, ರಾಜಕಾರಣಿಗಳು ಈ ಬಾರಿ ಬಿಗ್ ಬಾಸ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಹಾಗಾದರೆ ಯಾರು ಯಾರು ಬಿಗ್ ಬಾಸ್ ಶೋಗೆ ಬರುತ್ತಾರೆ?
Bigg Boss Kannada 10: ಈ ಧಾರಾವಾಹಿಗಳು ಸದ್ಯಕ್ಕೆ ಅಂತ್ಯವಾಗಲ್ಲ!
Bigg Boss Kannada 10: ಈ ಧಾರಾವಾಹಿಗಳು ಸದ್ಯಕ್ಕೆ ಅಂತ್ಯವಾಗಲ್ಲ!