ಹೆಚ್ಚು ಜನರಿಗೆ ಸಹಾಯ ಮಾಡುವ ಶಕ್ತಿ, ತಾಕತ್ತು ನನಗೆ ಸಿಗಲಿ ಎಂದು ಗಣಪತಿಯನ್ನ ಪ್ರಾರ್ಥಸಿದ್ದೇನೆ ಎಂದ ಸೋನು ಸೂದ್
1388 views
entertainment ವಿಡಿಯೋಗಳಿಗೆ ಚಂದಾದಾರರಾಗಿಸೋನು ಸೂದ್ ಅವರ ನಿವಾಸದಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಸೋನು ಸೂದ್ ಭಕ್ತಿಯಿಂದ ನಮಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೋನು ಸೂದ್, ‘’ಕಳೆದ 23 ವರ್ಷಗಳಿಂದ ಮನೆಯಲ್ಲಿ ಗಣೇಶ ಮೂರ್ತಿಯನ್ನ ತಂದು ಪೂಜೆ ಸಲ್ಲಿಸುತ್ತಿದ್ದೇವೆ. ಪ್ರತಿ ವರ್ಷವೂ ನಮಗೆ ಜೀವನದ ಹೊಸ ಪಾಠವನ್ನ ಗಣಪತಿ ಬಪ್ಪಾ ಕಲಿಸಿದ್ದಾನೆ. ಜನರ ಮುಖದಲ್ಲಿ ಖುಷಿ ತರಿಸಲು ಗಣಪತಿ ಬಪ್ಪಾ ನನಗೆ ದಾರಿ ತೋರಿಸಿದ್ದಾನೆ. ಅದೇ ರೀತಿಯಲ್ಲಿ ನಾನು ಮುಂದುವರೆಯಲು ಗಣಪತಿ ಬಪ್ಪಾ ನನಗೆ ಶಕ್ತಿ, ತಾಕತ್ತು ಕೊಡಲಿ ಎಂದು ನಾನು ಪ್ರಾರ್ಥಿಸಿದ್ದೇನೆ. ನನ್ನ ಜೀವನದಲ್ಲಿ ಗಣಪತಿ ತುಂಬಾ ಬದಲಾವಣೆ ತಂದಿದ್ದಾನೆ. ಅದನ್ನಂತೂ ನಾನು ಯಾವತ್ತೂ ಮರೆಯೋಲ್ಲ. ಮನೆಯಲ್ಲಿ ಗಣಪತಿಗಾಗಿ ಡೆಕೊರೇಷನ್ ಮಾಡಿರೋದು ನನ್ನ ಪತ್ನಿ ಸೊನಾಲಿ. ಪ್ರತಿ ವರ್ಷವೂ ವಿಭಿನ್ನವಾಗಿ ಡೆಕೊರೇಷನ್ ಮಾಡ್ತಾರೆ’’‘’ಒಬ್ಬರ ಜೀವ ಕಾಪಾಡುವುದಕ್ಕಿಂತ ಹೆಚ್ಚು ಖುಷಿ ಸಿನಿಮಾ ಸೂಪರ್ ಹಿಟ್ ಆದಾಗ ಸಿಗುವುದಿಲ್ಲ. ದೇಶದ ಮೂಲೆ ಮೂಲೆಯಿಂದಲೂ ಜನ ನನ್ನನ್ನ ಭೇಟಿಯಾಗಲು ಬರುತ್ತಾರೆ. ನಾನು ಮನೆಯಲ್ಲಿ ಇಲ್ಲದಿದ್ದರೂ ಅವರುಗಳ ಕಷ್ಟವನ್ನ ಪರಿಹಾರ ಮಾಡಲು ನನ್ನ ಟೀಮ್ ತಯಾರಿರುತ್ತದೆ. ಎಲ್ಲರಿಗೂ ನನ್ನಿಂದ ಸಹಾಯ ಆಗದಿರಬಹುದು. ಆದರೆ, ನಾನು ಪ್ರಯತ್ನ ಅಂತೂ ಪಡುತ್ತೇನೆ’’ ಎಂದರು.