Cannes Film Festival 2023: ಪತ್ನಿ ಪ್ರಿಯಾ ಜತೆಗೆ ಫ್ರಾನ್ಸ್ಗೆ ಹಾರಿದ 'ಜವಾನ್' ಡೈರೆಕ್ಟರ್ ಅಟ್ಲೀ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಫ್ರಾನ್ಸ್ನಲ್ಲಿ ಪ್ರತಿಷ್ಠಿತ ಕಾನ್ ಸಿನಿಮೋತ್ಸವವು ಮೇ 16ರಿಂದ ಆರಂಭವಾಗಿದೆ. ಮೇ 27ರವರೆಗೂ ಕಾನ್ ಸಿನಿಮೋತ್ಸವ ನಡೆಯಲಿದೆ. ಈಗಾಗಲೇ ಭಾರತದ ಅನೇಕ ತಾರೆಯರು ಈ ಫಿಲ್ಮ್ಫೆಸ್ಟ್ಗೆ ಹೋಗಿಬಂದಿದ್ದಾರೆ ಐಶ್ವರ್ಯಾ ರೈ ಬಚ್ಚನ್, ಊರ್ವಶಿ ರೌಟೇಲಾ, ವಿಜಯ್ ವರ್ಮಾ, ಅನುರಾಗ್ ಕಶ್ಯಪ್, ಸನ್ನಿ ಲಿಯೋನ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರು ಹಾಜರಿ ಹಾಕಿದ್ದಾರೆ. ಈಗ ತಮಿಳು ನಿರ್ದೇಶಕ ಅಟ್ಲೀ ಕೂಡ ಕಾನ್ಗೆ ಹೋಗಿದ್ದಾರೆ. ಮುಂಬೈ ಏರ್ಪೋರ್ಟ್ನಲ್ಲಿ ಅವರು ಪತ್ನಿ ಪ್ರಿಯಾ ಜತೆಗೆ ಅವರು ಕಾಣಿಸಿಕೊಂಡರು. ಅಂದಹಾಗೆ, ಅಟ್ಲೀಗೆ ಇದು ಮೊದಲ ಕಾನ್ ಫಿಲ್ಮ್ಫೆಸ್ಟ್ ಆಗಿದೆ. ಸದ್ಯ ಅಟ್ಲೀ ತಮಿಳು ಸಿನಿಮಾರಂಗದಿಂದ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ಅವರ ಮುಂದಿನ ಜವಾನ್ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡುತ್ತಿದ್ದು, ಸೆಪ್ಟೆಂಬರ್ನಲ್ಲಿ ಆ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.