ಸಲ್ಮಾನ್ ಖಾನ್ ಸಿನಿಮಾ ನೋಡಿದ ತಾರೆಯರು ಏನಂದರು?
1554 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಬಿಡುಗಡೆಯಾಗಿದೆ. ರಿಲೀಸ್ಗೂ ಮುನ್ನ.. ಅಂದ್ರೆ ಗುರುವಾರ ರಾತ್ರಿ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಪ್ರೀಮಿಯರ್ ಶೋವನ್ನು ಸಲ್ಮಾನ್ ಖಾನ್ ಆಯೋಜಿಸಿದ್ದರು. ಪ್ರೀಮಿಯರ್ ಶೋನಲ್ಲಿ ತಾರೆಯರು ಭಾಗವಹಿಸಿದ್ದರು. ಬಾಲಿವುಡ್ ನಟ ರಿತೇಶ್ ದೇಶ್ಮುಖ್, ನಟಿ ಶೆಹನಾಜ್ ಗಿಲ್, ನಟಿ ಪೂಜಾ ಹೆಗ್ಡೆ, ಪಲಕ್ ತಿವಾರಿ, ಶ್ವೇತಾ ತಿವಾರಿ, ಆಯುಷ್ ಶರ್ಮಾ, ಅರ್ಪಿತಾ ಖಾನ್ ಶರ್ಮಾ, ಲೂಲಿಯಾ ವ್ಯಾಂಟುರ್, ಭೂಮಿಕಾ ಚಾವ್ಲಾ ಮುಂತಾದವರು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಪ್ರೀಮಿಯರ್ ಶೋಗೆ ಹಾಜರಿದ್ದರು. ಚಿತ್ರ ವೀಕ್ಷಿಸಿದ ಶ್ವೇತಾ ತಿವಾರಿ ‘’ಸಿನಿಮಾ ಚೆನ್ನಾಗಿದೆ’’ ಎಂದರು. ಅಂದ್ಹಾಗೆ, ಫ್ಯಾಮಿಲಿ ಎಂಟರ್ಟೇನರ್ ಆಗಿರುವ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರಕ್ಕೆ ಫರ್ಹಾದ್ ಸಮ್ಜಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ, ಶೆಹನಾಜ್ ಗಿಲ್ ಅಭಿನಯಿಸಿದ್ದಾರೆ.