ಅನುಬಂಧಕ್ಕೆ 10 ವರ್ಷ; ನಟಿ ಅಂಕಿತಾ ಅಮರ್, ಶರ್ಮಿತಾ ಗೌಡ ಇತರರು ಭಾಗಿ
5921 views
entertainment ವಿಡಿಯೋಗಳಿಗೆ ಚಂದಾದಾರರಾಗಿಕಲರ್ಸ್ ಕನ್ನಡ ವಾಹಿನಿಯ 'ಅನುಬಂಧ' ಪ್ರಶಸ್ತಿಗೆ 10 ವರ್ಷದ ಸಂಭ್ರಮ. ಈ ಬಾರಿ ಅನುಬಂಧ ಅವಾರ್ಡ್ಸ್ಗೆ ವಿವಿಧ ಕ್ಯಾಟರಿಗಳಿದ್ದು, ಅವುಗಳಿಗೆ ಮತ ಹಾಕಲು ಕಲರ್ಸ್ ವಾಹಿನಿ ಹೊಸ ಉಪಾಯ ಕಂಡುಕೊಂಡಿದೆ. ಮೊಬೈಲ್ ಫೋನ್ ಇಲ್ಲ, ನೆಟ್ವರ್ಕ್ ಇಲ್ಲ, ಇಂಟರ್ನೆಟ್ ಸಮಸ್ಯೆ ಎಂದು ಅನೇಕರಿಗೆ ಆನ್ಲೈನ್ನಲ್ಲಿ ಮತ ಹಾಕಲು ಆಗುತ್ತಿರಲಿಲ್ಲ. ಹೀಗಾಗಿ ಕಲರ್ಸ್ ವಾಹಿನಿ ಈ ಬಾರಿ ಅನುಬಂಧ ರಥದ ವ್ಯವಸ್ಥೆ ಮಾಡಿದೆ. ಈ ವಾಹನ ರಾಜ್ಯಾದ್ಯಂತ ಸಂಚರಿಸಲಿದ್ದು, ಅಲ್ಲಿನ ವೀಕ್ಷಕರು ನೆಚ್ಚಿನ ನಟ, ನೆಚ್ಚಿನ ನಟಿ, ನೆಚ್ಚಿನ ಶಕುನಿ ಹೀಗೆ ನಾನಾ ವಿಭಾಗಗಳಿಗೆ ಮತ ಹಾಕಬಹುದು.ಅಂದಹಾಗೆ ಈ ವಾಹನಕ್ಕೆ ಚಾಲನೆ ನೀಡಲಾಗಿದ್ದು, ಈ ಸಂದರ್ಭದಲ್ಲಿ ನಟಿ ಅಂಕಿತಾ ಅಮರ್, ನಟಿ ಶರ್ಮಿತಾ ಗೌಡ, ನಟಿ ಪ್ರಥಮಾ ಪ್ರಸಾದ್, ನಿರಂಜನ್ ದೇಶಪಾಂಡೆ ಮುಂತಾದವರು ಭಾಗಿಯಾಗಿ ಪ್ರಶಸ್ತಿ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಕಿರುತೆರೆ ಕಲಾವಿದರ ಸಂಭಾವನೆ ಹೇಗಿದೆ ನೋಡಿ
ಕನ್ನಡ ಕಿರುತೆರೆ ಕಲಾವಿದರ ಸಂಭಾವನೆ ಹೇಗಿದೆ ನೋಡಿ