ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ 'ಡಾಲಿ' ಧನಂಜಯ್
1265 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟ 'ಡಾಲಿ' ಧನಂಜಯ್ ಅವರು ಆಗಾಗ ತಮ್ಮ ಸ್ನೇಹಿತರೊಂದಿಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಬೆಟ್ಟದ ಮಾದಪ್ಪನ ಸನ್ನಿಧಿಗೆ ಹೋಗಿ ಆಶೀರ್ವಾದ ಪಡೆದುಕೊಂಡು ಬರುತ್ತಿರುತ್ತಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಧನಂಜಯ್ ನಿರ್ಮಾಣ ಮಾಡಿದ್ದ ಮೂರನೇ ಸಿನಿಮಾ 'ಟಗರು ಪಲ್ಯ' ಇನ್ನೂ ತೆರೆಕಂಡಿರಲಿಲ್ಲ. ಆಗಲೂ ಅವರು ಒಮ್ಮೆ ಬೆಟ್ಟದ ಮಾದಪ್ಪನ ದರ್ಶನ ಪಡೆದುಕೊಂಡು ಬಂದಿದ್ದರು.
ಇದೀಗ 'ಟಗರು ಪಲ್ಯ' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡು, ಯಶಸ್ಸಾಗಿದೆ. ಧನಂಜಯ್ಗೂ ಉತ್ತಮ ಲಾಭವನ್ನು ತಂದುಕೊಟ್ಟಿದೆ. ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿ, ಅಲ್ಲಿಯೂ ಎಲ್ಲರ ಗಮನಸೆಳೆಯುತ್ತಿದೆ. ಅಲ್ಲದೆ, ಜನವರಿ 7ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ 'ಟಗರು ಪಲ್ಯ' ಸಿನಿಮಾ ಪ್ರೀಮಿಯರ್ ಆಗುತ್ತಿದೆ. ಆ ಹಿನ್ನೆಲೆಯಲ್ಲಿ ಭಾನುವಾರ (ಜನವರಿ 7) ತಮ್ಮ ಸ್ನೇಹಿತರ ಜೊತೆಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಧನಂಜಯ್ ಅವರು ಭೇಟಿ ನೀಡಿದ್ದರು. ಧನಂಜಯ್ ಜೊತೆಗೆ ಸ್ನೇಹಿತ, ನಟ ನಾಗಭೂಷಣ್ ಕೂಡ ಇದ್ದರು.