ಅಣ್ಣಾವ್ರ ಮೊಮ್ಮಗ ಯುವ ರಾಜ್ಕುಮಾರ್ನ ಬಿಗಿದಪ್ಪಿದ ದರ್ಶನ್
1319 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಅಣ್ಣಾವ್ರ ಮೊಮ್ಮಗ ಯುವ ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಾಯಿರೋದು ‘ಯುವ’ ಸಿನಿಮಾದ ಮೂಲಕ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಂತೋಷ್ ಆನಂದ್ರಾಮ್ ನಿರ್ದೇಶನದ ‘ಯುವ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಚ್ಎಂಟಿಯಲ್ಲಿ ‘ಯುವ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಸೆಟ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಢೀರ್ ಭೇಟಿ ಕೊಟ್ಟರು. ‘ಯುವ’ ಸೆಟ್ಗೆ ಸರ್ಪ್ರೈಸ್ ಎಂಟ್ರಿಕೊಟ್ಟ ದರ್ಶನ್, ಯುವ ರಾಜ್ಕುಮಾರ್ರನ್ನ ಬಿಗಿದಪ್ಪಿದರು. ಕೈಕುಲುಕಿ ಸಂತೋಷ್ ಆನಂದ್ರಾಮ್ ಅವರನ್ನ ದರ್ಶನ್ ಮಾತನಾಡಿಸಿದರು. ಕೆಲ ಕಾಲ ‘ಯುವ’ ಸೆಟ್ನಲ್ಲಿದ್ದು, ಎಲ್ಲರೊಂದಿಗೆ ದರ್ಶನ್ ಹರಟಿದರು. ‘ಯುವ’ ಸೆಟ್ನಲ್ಲಿ ದರ್ಶನ್ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದನ್ನ ಕಂಡ ಅಭಿಮಾನಿಗಳಿಗೆ ‘ಯುವ’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರಾ ಎಂಬ ಅನುಮಾನ ಕೂಡ ಕಾಡುತ್ತಿದೆ.