ಮೊದಲ ತೆಲುಗು ಚಿತ್ರದ ಶೂಟಿಂಗ್ಗಾಗಿ ಹೈದರಾಬಾದ್ಗೆ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ನಟಿ ದೀಪಿಕಾ ಪಡುಕೋಣೆ ಅವರು ಇದೇ ಮೊದಲ ಬಾರಿಗೆ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಹೌದು, ಪ್ರಭಾಸ್ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾದ ನಾಯಕಿಯಾಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಸದ್ಯ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಸೋಮವಾರ ಮುಂಬೈನಿಂದ ಹೈದರಾಬಾದ್ಗೆ ದೀಪಿಕಾ ಆಗಮಿಸಿದ್ದಾರೆ. 'ಪ್ರಾಜೆಕ್ಟ್ ಕೆ' ಒಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ವಿಶೇಷವೆಂದರೆ, ಪ್ರಭಾಸ್, ದೀಪಿಕಾ ಜೊತೆಗೆ ಅಮಿತಾಭ್ ಬಚ್ಚನ್, ದಿಶಾ ಪಟಾಣಿ ಕೂಡ ಇದ್ದಾರೆ. ಲೇಟೆಸ್ಟ್ ಅಪ್ಡೇಟ್ ಏನಪ್ಪ ಅಂದ್ರೆ, ನಟ ಕಮಲ್ ಹಾಸನ್ ಅವರು 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. 'ಪ್ರಾಜೆಕ್ಟ್ ಕೆ' ಸಿನಿಮಾವು ಅಂದಾಜು 500ರಿಂದ 600 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿದೆ.