ಭರ್ಜರಿಯಾಗಿ ಗಣೇಶ ಚತುರ್ಥಿ ಆಚರಿಸಿದ ಶಿಲ್ಪಾ ಶೆಟ್ಟಿ; ಹಬ್ಬದಲ್ಲೂ ಮುಖ ಮುಚ್ಚಿಕೊಂಡು ಓಡಾಡಿದ ರಾಜ್ ಕುಂದ್ರಾ!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರತಿವರ್ಷವು ಸಂಭ್ರಮದಿಂದ ಗಣಪತಿ ಹಬ್ಬವನ್ನು ಆಚರಿಸುತ್ತಾರೆ. ಗಣಪತಿ ಮೂರ್ತಿಯನ್ನು ಮನೆಗೆ ತಂದು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತಾರೆ. ಈ ಬಾರಿಯೂ ಕೂಡ ಅವರು ಕಟುಂಬಸಮೇತರಾಗಿ ಹೋಗಿ, ಗಣಪತಿ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಅವರ ಮನೆ-ಮಂದಿಯ ಮುಖದಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಈ ವೇಳೆ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕೂಡ ಇದ್ದರು. ಆದರೆ ಅವರ ವರ್ತನೆ ಮಾತ್ರ ಎಲ್ಲರಿಗೂ ಕಿರಿ ಕಿರಿ ಉಂಟು ಮಾಡಿದೆ. ಹೌದು, ಎಲ್ಲರಿಗೂ ಗೊತ್ತಿರುವಂತೆ ರಾಜ್ ಕುಂದ್ರಾ ಈಚೆಗೆ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಜೈಲಿಗೆ ಹೋಗಿಬಂದಿದ್ದರು. ಆ ಬಳಿಕ ಅವರು ಸಾರ್ವಜನಿಕವಾಗಿ ಎಲ್ಲಿಯೂ ಮುಖ ತೋರಿಸುತ್ತಿಲ್ಲ. ಇದೀಗ ಹಬ್ಬದ ಸಮಯದಲ್ಲೂ ಅವರು ತಮ್ಮ ವರ್ತನೆಯನ್ನು ಮುಂದುವರಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ.
Produced byCurated byಅವಿನಾಶ್ ಜಿ. ರಾಮ್|TimesXP Kannada|18 Sept 2023