'ಕೊರಗಜ್ಜ' ಚಿತ್ರಕ್ಕಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟ ಕಬೀರ್ ಬೇಡಿ; ಕನ್ನಡದಲ್ಲೇ ಡಬ್ಬಿಂಗ್ ಮಾಡಿದ ಹಾಲಿವುಡ್ ನಟ
Curated by Avinash Gr|Vijaya Karnataka Web|26 May 2023
ನಿರ್ದೇಶಕ ಸುಧೀರ್ ಅತ್ತಾವರ್ ಅವರು 'ಕೊರಗಜ್ಜ' ಸಿನಿಮಾವನ್ನು ಮಾಡುತ್ತಿದ್ದು, ಈ ಸಿನಿಮಾಕ್ಕೆ ಸಾಕಷ್ಟು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಟ ಕಬೀರ್ ಬೇಡಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ, ಅವರೇ ತಮ್ಮ ಪಾತ್ರಕ್ಕೆ ಕನ್ನಡದಲ್ಲೂ ಡಬ್ ಮಾಡಿದ್ದಾರೆ. 'ಕೊರಗಜ್ಜ' ಚಿತ್ರದಲ್ಲಿನ ಉದ್ಯಾವರ ಅರಸರ ಪಾತ್ರವನ್ನು ಕಬೀರ್ ಬೇಡಿ ನಿಭಾಯಿಸಿದ್ದಾರೆ. ಶೂಟಿಂಗ್ ಮಾಡುವಾಗಲೇ ತಮ್ಮ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡ್ತಿನಿ ಅಂತ ಕಬೀರ್ ಹೇಳಿದ್ರಂತೆ. ಆದರೆ ನಿರ್ದೇಶಕ ಸುಧೀರ್ಗೆ 'ಇದು ಸಾಧ್ಯವೇ' ಅನ್ನೋ ಅನುಮಾನವಿತ್ತು. ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ನಟಿಸಿರುವ ಕಬೀರ್, ಕನ್ನಡ, ತುಳು, ಮಲಯಾಳಂ ಭಾಷೆಗಳ ಸೊಗಡನ್ನು ಕಲಿತು ಡಬ್ ಮಾಡ್ತಾರಾ ಅನ್ನೋ ಅನುಮಾನ ಸುಧೀರ್ಗೆ ಮೂಡಿತ್ತಂತೆ. ಆದರೆ ಕಬೀರ್ ಬೇಡಿ ಮುಂಬೈನ ಸ್ಟುಡಿಯೋವೊಂದರಲ್ಲಿ ಸಾಕಷ್ಟು ತಯಾರಿಗಳ ನಂತರ ಕನ್ನಡದಲ್ಲೇ 'ಕೊರಗಜ್ಜ' ಸಿನಿಮಾಗೆ ಡಬ್ಬಿಂಗ್ ಮಾಡಿದ್ದಾರೆ. ತ್ರಿವಿಕ್ರಮ ಸಾಪಲ್ಯ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ನಟಿ ಭವ್ಯಾ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ.