'ಸಿನಿಮಾದಲ್ಲಿ ನಿಂಗ್ ಚಾನ್ಸ್ ಸಿಗಲ್ಲ, ಫ್ಯಾಕ್ಟರಿನೋ, ಗಾರ್ಮೆಂಟ್ಸೋ ಸೇರ್ಕೊ ಅಂತ ನಮ್ಮಪ್ಪ ಬೈದಿದ್ರು...'- ನಟ ಚೇತನ್ ದುರ್ಗ
7286 views
entertainment ವಿಡಿಯೋಗಳಿಗೆ ಚಂದಾದಾರರಾಗಿ8-10 ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಕಲಾವಿದ ನಟ ಚೇತನ್ ದುರ್ಗ. ಅದರಲ್ಲೂ ಕಳೆದ 3-4 ವರ್ಷಗಳಿಂದ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಅವರ ಕಾಮಿಡಿ ವಿಡಿಯೋಗಳಿಗೆ ಒಂದು ಅಭಿಮಾನಿ ವರ್ಗವೇ ಇದೆ. ಅಂದಹಾಗೆ, ಚೇತನ್ಗೆ ನಟನಾಗಬೇಕು ಎಂಬ ಕನಸು ಚಿಕ್ಕ ವಯಸ್ಸಿನಿಂದಲೇ ಇತ್ತು. ಎಂಜಿನಿಯರಿಂಗ್ ಓದಿರುವ ಅವರು, ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲ ಸಮಯ ಕೆಲಸ ಮಾಡಿಕೊಂಡಿದ್ದರು. ಆದರೆ ಸಿನಿಮಾರಂಗಕ್ಕೆ ಹೋಗಬೇಕು, ಆ್ಯಕ್ಟರ್ ಆಗಲೇಬೇಕು ಎಂಬ ಉದ್ದೇಶದಿಂದ ಅವರು, ಕೈತುಂಬ ಸಂಬಳ ಬರುತ್ತಿದ್ದ ಕೆಲಸಕ್ಕೆ ಗುಡ್ಬೈ ಹೇಳಿ, ಚಿತ್ರರಂಗದತ್ತ ಮುಖ ಮಾಡಿದರು. ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದ ಚೇತನ್ಗೆ ಈಗ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಿಂದ ಭರ್ಜರಿ ಯಶಸ್ಸು ಸಿಕ್ಕಿದೆ. ಅವರ ಲೈಫ್ ಜರ್ನಿ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.