'ಕಿಚ್ಚ' ಸುದೀಪ್ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ಪ್ಲ್ಯಾನ್; ಇಲ್ಲಿದೆ ಎಕ್ಸ್ಕ್ಲೂಸಿವ್ ಮಾಹಿತಿ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ನಟ 'ಕಿಚ್ಚ' ಸುದೀಪ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು (ಸೆ.2) ಅದ್ದೂರಿಯಾಗಿ ಆಚರಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಬಾರಿಯು ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಸೆ.1ರ ರಾತ್ರಿಯೇ ಅಭಿಮಾನಿಗಳು ಜಮಾಯಿಸುತ್ತಿದ್ದರು. ಆದರೆ ಈ ಬಾರಿ ಅದರಲ್ಲಿ ಕೊಂಚ ಬದಲಾವಣೆ ಇರಲಿದೆ. ಜೆಪಿ ನಗರದ ನಿವಾಸದ ಬದಲು ಹೊಸಕೆರೆಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ ಕಿಚ್ಚ ಸುದೀಪ್. ಸೆ.1ರ ರಾತ್ರಿ 10 ಗಂಟೆಯಿಂದ 12ರವರೆಗೆ ಅಲ್ಲಿಯೇ ಇರುವ ಅವರು, ಫ್ಯಾನ್ಸ್ ಜೊತೆಗೆ ಕೇಕ್ ಕಟ್ ಮಾಡಲಿದ್ದಾರೆ. ಹಾಗೆಯೇ, ಈ ಬಾರಿ ಹುಟ್ಟುಹಬ್ಬಕ್ಕೆ ಒಂದು ಬಿಗ್ ಸರ್ಪ್ರೈಸ್ ಕೂಡ ಇರಲಿದೆಯಂತೆ. ಸುದೀಪ್ ಅವರ ಹುಟ್ಟುಹಬ್ಬ ಆಚರಣೆ ಕುರಿತಂತೆ ಅವರ ಅಭಿಮಾನಿ ಸಂಘದ ಪದಾಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿದ್ದು, ಆ ಕುರಿತ ವಿಡಿಯೋ ಇಲ್ಲಿದೆ.