Sarja Family: 'ಮೊದಲು ರಾಯನ್ ಬಂದ, ಆಮೇಲೆ ಮಗಳು, ಈಗ ಮಗ ಬಂದಿದ್ದಾನೆ...'- ನಟ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ದಂಪತಿಗೆ ಗಂಡು ಮಗು ಜನಿಸಿದೆ. ಮಗ ಹುಟ್ಟಿದ ಖುಷಿಯಲ್ಲಿ ಮಾಧ್ಯಮಗಳಿಗೆ ಫಸ್ಟ್ ರಿಯಾಕ್ಷನ್ ನೀಡಿರುವ ನಟ ಧ್ರುವ ಸರ್ಜಾ, 'ನಾನು ಪ್ರತಿ ಕ್ಷಣವೂ ಅಣ್ಣನನ್ನು (ಚಿರಂಜೀವಿ ಸರ್ಜಾ) ಮಿಸ್ ಮಾಡಿಕೊಳ್ಳುತ್ತೇನೆ.. ಮಗ ಹುಟ್ಟಿದ ಎಂದು ಗೊತ್ತಾಗುತ್ತಿದ್ದಂತೆಯೇ, ಅಣ್ಣನಿಗೆ ಫೋನ್ ಮಾಡಬೇಕು ಎಂದುಕೊಂಡೆ.. ನನಗೆ ಈಗ ಮೂವರು ಮಕ್ಕಳು. ರಾಯನ್ ಯಾವತ್ತಿದ್ರೂ ನನ್ನ ಮಗನೇ. ಮೊದಲು ರಾಯನ್ ಬಂದ, ಮಗಳು ಬಂದಳು.. ಈಗ ಮಗ ಹುಟ್ಟಿದ್ದಾನೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನಾರ್ಮಲ್ ಡೆಲಿವರಿ ಆಗಿದೆ. ಅರ್ಜುನ್ ಸರ್ಜಾ ಅಂಕಲ್ಗೆ ವಿಡಿಯೋ ಕಾಲ್ ಮಾಡಿ, ಮಗುವನ್ನು ತೋರಿಸಿದೆ. ಅವರು ಶೀಘ್ರದಲ್ಲೇ ಬಂದು ಮಗುವನ್ನು ನೋಡಲಿದ್ದಾರೆ..' ಎಂದು ಹೇಳಿದರು. ಹಾಗೆಯೇ, ಮೇಘನಾ ರಾಜ್ ಸರ್ಜಾ, ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರು ಕೂಡ ಆಸ್ಪತ್ರೆಗೆ ಬಂದು ಧ್ರುವ ಮಗನನ್ನು ನೋಡಿ, ಖುಷಿ ಪಟ್ಟರು. ಸುಂದರ್ ರಾಜ್ & ಪ್ರಮೀಳಾ ಜೋಷಾಯ್ ದಂಪತಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
Authored byCurated byಅವಿನಾಶ್ ಜಿ. ರಾಮ್|TimesXP Kannada|18 Sept 2023