ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ ಡೇಟಿಂಗ್? ಅಸಲಿ ವಿಚಾರ ತಿಳಿಸಿದ 'ಕರಾವಳಿ ಚೆಲುವೆ'
1551 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟಿ ಪೂಜಾ ಹೆಗ್ಡೆ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ? ಹೀಗೊಂದು ಪ್ರಶ್ನೆ ಸಖತ್ ಸದ್ದು ಮಾಡುತ್ತಿದ್ಧಾರೆ. ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್ ಈಗಾಗಲೇ ಹಲವು ನಟಿಯರೊಂದಿಗೆ ಪ್ರೀತಿಯಲ್ಲಿದ್ದು, ಕೊನೆಗೆ ಬ್ರೇಕ್ಅಪ್ ಕೂಡ ಆಗಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಸದ್ಯ 'ಕಿಸಿ ಕಾ ಭಾಯ್ ಕಿಸಿ ಸಿ ಜಾನ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಒಟ್ಟಿಗೆ ನಟಿಸಿದ್ದಾರೆ. ಆ ಕಾರಣಕ್ಕೆ ಇಂಥದ್ದೊಂದು ಗಾಸಿಪ್ಗೆ ಜೀವ ಸಿಕ್ಕಿದೆ. ಆದ್ರೆ ಇದು ನಿಜವೇ? ಖಂಡಿತ ಇಲ್ಲ! ಈ ಬಗ್ಗೆ ಸ್ವತಃ ಪೂಜಾ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.
'ಅದರ ಬಗ್ಗೆ ನಾನೇನೂ ಹೇಳಲಿ? ನನ್ನ ಬಗ್ಗೆ ಬರೆಯುವ ಇಂತಹ ಸುದ್ದಿಗಳನ್ನು ನಾನು ಓದುತ್ತಲೇ ಇರುತ್ತೇನೆ. ನಾನು ಸಿಂಗಲ್ ಮತ್ತು ಸಿಂಗಲ್ ಆಗಿ ಇರುವುದನ್ನೇ ಪ್ರೀತಿಸುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಮೇಲೆ ಪ್ರಾಮಾಣಿಕವಾಗಿ ಗಮನ ನೀಡಿದ್ದೇನೆ. ಒಂದು ಕಡೆ ಕುಳಿತು, ಇಂತಹ ಗಾಸಿಪ್ಗಳಿಗೆಲ್ಲ ಸ್ಪಷ್ಟನೆ ನೀಡಲು ನನ್ನಿಂದ ಸಾಧ್ಯವಿಲ್ಲ..' ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. ಅಂದಹಾಗೆ, 'ಕಿಸಿ ಕಾ ಭಾಯ್ ಕಿಸಿ ಸಿ ಜಾನ್' ಸಿನಿಮಾವು ಏಪ್ರಿಲ್ 21ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಸಲ್ಮಾನ್ ಖಾನ್ ಅವರ ಹೋಮ್ ಬ್ಯಾನರ್ನಲ್ಲೇ ಈ ಸಿನಿಮಾ ನಿರ್ಮಾಣವಾಗಿದೆ.
Pooja Hegde: ಸಲ್ಮಾನ್ ಖಾನ್ ಜೊತೆಗೆ ಲವ್? 'ನಾನೇನು ಹೇಳಲಿ' ಎಂದ ಪೂಜಾ ಹೆಗ್ಡೆ