Raai Laxmi: ಗೆಳತಿ ಮದುವೆಯಲ್ಲಿ ಮಿರಿ ಮಿರಿ ಮಿಂಚಿದ ಬೆಳಗಾವಿಯ ಲಕ್ಷ್ಮೀ ರೈ
3511 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಸೋನಾನಿ ಸೆಹಗಲ್ ಮದುವೆಯಲ್ಲಿ ಎಲ್ಲರ ಕಣ್ಣು ಲಕ್ಷ್ಮೀ ರೈ ಮೇಲೆ...ನಟಿ ಲಕ್ಷ್ಮೀ ರೈ ಅವರು ಮುಂಬೈನಲ್ಲಿ ನಡೆದಿರುವ ಸೋನಾಲಿ ಸೆಹಗಲ್ ಹಾಗೂ ಆಶೇಶ್ ಎಲ್ ಸಜ್ನಾನಿ ಅವರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸೋನಾಲಿ ಅವರ ಗೆಳತಿ ಲಕ್ಷ್ಮೀ ರೈ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಇತರ ಸ್ನೇಹಿತೆಯರ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಈ ಮದುವೆಯಲ್ಲಿ ಬೆಳಗಾವಿಯ ಬೆಡಗಿ ಲಕ್ಷ್ಮೀ ರೈ ಮಿರಿ ಮಿರಿ ಮಿಂಚಿದ್ದಾರೆ. ಗೆಳತಿಯ ಮದುವೆಯಲ್ಲಿ ಮಿಂಚಿರುವ ಲಕ್ಷ್ಮೀ ರೈ ಯಾವಾಗ ಅವರು ಮದುವೆಯಾಗ್ತಾರೆ ಅಂತ ಕಾದು ನೋಡಬೇಕಿದೆ. ನಿರ್ದೇಶಕ ಲವ್ ರಂಜನ್, ನಟ, ಸನ್ನಿ ಸಿಂಗ್, ಸಹಿಲ್ ಸಲಾಥಿಯಾ, ಶಮಾ ಸಿಖಂಧರ್ ಮುಂತಾದವರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ನಟನೆಯ Pyaar ka Punchnama ಎನ್ನುವ ಸಿನಿಮಾದಲ್ಲಿ ಸೋನಾಲಿ ಅವರು ನಟಿಸಿದ್ದರು. ಹೀಗಾಗಿ ಈ ಚಿತ್ರತಂಡ ಇವರ ಮದುವೆ, ಆರತಕ್ಷತೆಯಲ್ಲಿ ಭಾಗಿಯಾಗಲಿದೆ ಎನ್ನಲಾಗಿದೆ. ಸೋನಾಲಿ ಅವರು ಕೆಲ ಹಿಂದಿ ಸಿನಿಮಾ, ವೆಬ್ ಸಿರೀಸ್, ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮುದ್ದಿನ ಶ್ವಾನ ಬೌಂಟಿ ಜೊತೆ ಕಲ್ಯಾಣ ಮಂಟಪಕ್ಕೆ ಬಂದ ನಟಿ ಸೋನಾಲಿ ಸೆಹಗಲ್
ಮುದ್ದಿನ ಶ್ವಾನ ಬೌಂಟಿ ಜೊತೆ ಕಲ್ಯಾಣ ಮಂಟಪಕ್ಕೆ ಬಂದ ನಟಿ ಸೋನಾಲಿ ಸೆಹಗಲ್