ನಟ ಸಂಜಯ್ ದತ್ಗೆ ಜನ್ಮದಿನದ ಶುಭಾಶಯ ತಿಳಿಸಲು ಬಂದ ಅಭಿಮಾನಿಗಳು
1274 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿನಟ ಸಂಜಯ್ ಅವರು ದತ್ ಅವರು ಇಂದು (ಜುಲೈ 29) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಂಜುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು, ಅವರ ಮನೆ ಬಳಿ ಫ್ಯಾನ್ಸ್ ಬಂದಿದ್ದರು. ಅವರನ್ನೆಲ್ಲ ಸಂಜಯ್ ದತ್ ಭೇಟಿಯಾಗಿದ್ದಾರೆ. ಅಂದಹಾಗೆ, 'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಅಧೀರನಾಗಿ ಅಬ್ಬರಿಸಿದ್ದ ಸಂಜಯ್ ದತ್, ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಹೆಚ್ಚು ಸಕ್ರಿಯವಾಗುತ್ತಿದ್ದಾರೆ. 'ಲಿಯೋ' ಚಿತ್ರದಲ್ಲಿ 'ದಳಪತಿ' ವಿಜಯ್ ಜೊತೆ ನಟಿಸಿರುವ ಸಂಜಯ್ ದತ್, ಕನ್ನಡದಲ್ಲೂ ಮತ್ತೆ ಕೆಲಸ ಮಾಡುತ್ತಿದ್ದಾರೆ. 'ಜೋಗಿ' ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನ 'ಕೆಡಿ' ಚಿತ್ರದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ. ಚಿತ್ರೀಕರಣದ ಸಲುವಾಗಿ ಈಚೆಗೆ ಮೈಸೂರಿಗೆ ಬಂದಿದ್ದ ಅವರು, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಆಶೀರ್ವಾದ ಪಡೆದುಕೊಂಡಿದ್ದರು. ಸದ್ಯ ಅವರೀಗ ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ ಪುರಿ ಜಗನ್ನಾಥ್ ನಿರ್ದೇಶನ ಮಾಡಲಿರುವ 'ಡಬಲ್ ಇಸ್ಮಾರ್ಟ್' ಚಿತ್ರದಲ್ಲಿ ಸಂಜು ನಟಿಸಲಿದ್ದಾರೆ. ರಾಮ್ ಪೋತಿನೇನಿ ಹೀರೋ ಆಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಂಜಯ್ ದತ್ ಬಿಗ್ ಬುಲ್ ಎಂಬ ಪಾತ್ರ ಮಾಡಲಿದ್ದಾರೆ.