ಚತುರ್ಭಾಷೆಯಲ್ಲಿ ಬ್ಯುಸಿಯಾದ 'ನಾಗಿಣಿ' ಧಾರಾವಾಹಿ ನಟ ದೀಕ್ಷಿತ್ ಶೆಟ್ಟಿ; ಇವ್ರ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?
1143 views
entertainment ವಿಡಿಯೋಗಳಿಗೆ ಚಂದಾದಾರರಾಗಿನಟ ದೀಕ್ಷಿತ್ ಶೆಟ್ಟಿ ಅವರು ಸದ್ಯ ದಕ್ಷಿಣ ಭಾರತದಲ್ಲಿ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ. 'ನಾಗಿಣಿ' ಧಾರಾವಾಹಿಯಿಂದ ಫೇಮಸ್ ಆದ ದೀಕ್ಷಿತ್ಗೆ ಸಿನಿಮಾರಂಗದಲ್ಲಿ ಬ್ರೇಕ್ ನೀಡಿದ್ದು 'ದಿಯಾ' ಸಿನಿಮಾ. ಆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ, ಎಲ್ಲರ ಗಮನಸೆಳೆದ ದೀಕ್ಷಿತ್, ತೆಲುಗಿನಲ್ಲೂ ಸದ್ದು ಮಾಡಿದ್ದರು. ಈ ವರ್ಷ ತೆರೆಗೆ ಬಂದ 'ದಸರಾ' ಸಿನಿಮಾದಿಂದ ಪ್ಯಾನ್ ಇಂಡಿಯಾ ಸಕ್ಸಸ್ ದೀಕ್ಷಿತ್ಗೆ ಸಿಕ್ಕಿದೆ. ನಾನಿ, ಕೀರ್ತಿ ಸುರೇಶ್ ನಟಿಸಿದ್ದ ಈ ಸಿನಿಮಾದಲ್ಲಿ ದೀಕ್ಷಿತ್ಗೂ ಪ್ರಧಾನ ಪಾತ್ರವೇ ಸಿಕ್ಕಿತ್ತು. 'ದಿಯಾ' ತೆರೆಕಂಡು ಸಾಕಷ್ಟು ಸಮಯದ ನಂತರ 'ದಸರಾ' ರಿಲೀಸ್ ಆಗಿತ್ತು. ನೂರು ಕೋಟಿ ಕ್ಲಬ್ಗೂ ಈ ಸಿನಿಮಾ ಸೇರಿತ್ತು. ಇದೀಗ ಎಲ್ಲರ ಪ್ರಶ್ನೆ, ದೀಕ್ಷಿತ್ ನಟನೆಯ ಮುಂದಿನ ಸಿನಿಮಾಗಳು ಯಾವುವು? ಯಾವೆಲ್ಲ ಭಾಷೆಯಲ್ಲಿ ತೆರೆಗೆ ಬರಲಿವೆ ಎಂಬುದು. ಅದಕ್ಕುತ್ತರ ಇಲ್ಲಿದೆ. 'ನ್ಯಾಷನಲ್ ಕ್ರಶ್' ರಶ್ಮಿಕಾ ಅವರ ಹೊಸ ಸಿನಿಮಾವು ಸೇರಿದಂತೆ ಹಲವು ಸಿನಿಮಾಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ದೀಕ್ಷಿತ್ ಬಣ್ಣ ಹಚ್ಚಿದ್ದಾರೆ. ಸಿನಿಮಾಗಳ ಜೊತೆಗೆ ವೆಬ್ ಸೀರೀಸ್ ಲೋಕಕ್ಕೂ ಪ್ರವೇಶ ನೀಡಿದ್ದಾರೆ. ಅದೆಲ್ಲದರ ಕಂಪ್ಲೀಟ್ ಮಾಹಿತಿಯನ್ನು ವಿಜಯ ಕರ್ನಾಟಕ ವೆಬ್ಗೆ ನೀಡಿರುವ ಈ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.