ಮುಂಚೆ ಹೆಂಗ್ಹೆಂಗೋ ಇದ್ದೆ, ರಚನಾ ಬಂದ್ಮೇಲೆ ಜೀವನ ಬದಲಾಗಿದೆ - ನಟ ಲೋಕೇಶ್ ಬಸವಟ್ಟಿ
1689 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ‘ಪಾಯಿಂಟ್ ಪರಿಮಳ’, ‘ಪಾರ್ವತಿ ಪರಮೇಶ್ವರ’ ಮುಂತಾದ ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದ ನಟ ಲೋಕೇಶ್ ಬಸವಟ್ಟಿ. ‘ಅಗ್ರಸೇನ’, ‘ಬಂಧು’, ‘ಅಘೋರ’ ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದವರು ನಟಿ ರಚನಾ ದಶರಥ್. ಈ ವರ್ಷದಾರಂಭದಲ್ಲಿ ಲೋಕೇಶ್ ಬಸವಟ್ಟಿ ಹಾಗೂ ರಚನಾ ದಶರಥ್ ವೈವಾಹಿಕ ಜೀವನಕ್ಕೆ ನಾಂದಿ ಹಾಡಿದರು. ಲೋಕೇಶ್ ಮತ್ತು ರಚನಾ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿರುವ ‘ನಮ್ ಫ್ಯಾಮಿಲಿ’ ಸ್ಪೆಷಲ್ ಸೀರೀಸ್ಗಾಗಿ ವಿಶೇಷ ಸಂದರ್ಶನ ನೀಡಿದ್ದಾರೆ. ಲೋಕೇಶ್ ಬಸವಟ್ಟಿ ಹಾಗೂ ರಚನಾ ದಶರಥ್ ಅವರದ್ದು ಅರೇಂಜ್ ಕಮ್ ಲವ್ ಮ್ಯಾರೇಜ್. ‘ಗೌರಿಪುರದ ಗಯ್ಯಾಳಿಗಳು’ ಸೀರಿಯಲ್ನಲ್ಲಿ ಒಟ್ಟಿಗೆ ಅಭಿನಯಿಸಿದ ಇವರಿಬ್ಬರು ಆತ್ಮೀಯರಾದರು. ಮನೆಯವರು ನಿಶ್ಚಿಯಿಸಿದಂತೆ ಕಳೆದ ಜನವರಿ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲೋಕೇಶ್ ಹಾಗೂ ರಚನಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪೋಷಕರಾಗಿ ಬಡ್ತಿ ಪಡೆಯುತ್ತಿರುವ ಲೋಕೇಶ್ - ರಚನಾ ಅವರ ಮ್ಯಾರೇಜ್ ಸ್ಟೋರಿ ಈ ವಿಡಿಯೋದಲ್ಲಿದೆ. ನೋಡಿ..