‘ಪೈಲ್ವಾನ್’ ಸುದೀಪ್ ಜೊತೆ ನಟಿಸುವ ಅವಕಾಶ ಕೈತಪ್ಪಿ ಹೋಯ್ತು! ಬಹಳ ಬೇಜಾರಾಯ್ತು - ಲೋಕೇಶ್ ಬಸವಟ್ಟಿ
1242 views
entertainment ವಿಡಿಯೋಗಳಿಗೆ ಚಂದಾದಾರರಾಗಿ‘ಪಾಯಿಂಟ್ ಪರಿಮಳ’, ‘ಸಿಲ್ಲಿ ಲಲ್ಲಿ’, ‘ಪಾರ್ವತಿ ಪರಮೇಶ್ವರ’, ‘ಗೌರಿಪುರದ ಗಯ್ಯಾಳಿಗಳು’ ಮುಂತಾದ ಸೀರಿಯಲ್ಗಳಲ್ಲಿ ಅಭಿನಯಿಸಿರುವ ನಟ ಲೋಕೇಶ್ ಬಸವಟ್ಟಿ. ಚಿತ್ರರಂಗ ಹಾಗೂ ಕಿರುತೆರೆ.. ಎರಡರಲ್ಲೂ ಬಿಜಿಯಾಗಿರುವ ಲೋಕೇಶ್ ಬಸವಟ್ಟಿ ಅವರ ಜೀವನದ ಪರಿಚಯವನ್ನ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿರುವ ‘ನನ್ನ ಲೈಫು’ ಸ್ಪೆಷಲ್ ಸೀರೀಸ್ ವಿಡಿಯೋದಲ್ಲಿ ಮಾಡಿಕೊಡಲಾಗಿದೆ. ಚಾಮರಾಜನಗರದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಪಡೆದಿರುವ ಲೊಕೇಶ್ ಬಸವಟ್ಟಿ ಅವರಿಗೆ ನಟನೆಯಲ್ಲಿ ಡಾ ರಾಜ್ಕುಮಾರ್ ಸ್ಫೂರ್ತಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪ್ಪಟ ಅಭಿಮಾನಿಯಾಗಿರುವ ಲೋಕೇಶ್ ಬಸವಟ್ಟಿ, ತಮ್ಮ ತಾತನ ತಿಥಿ ದಿನವೇ ‘ಪ್ರೀತ್ಸೋದ್ ತಪ್ಪಾ’ ಸಿನಿಮಾ ವೀಕ್ಷಿಸಿದ್ದರಂತೆ. ತಮ್ಮ ಸ್ಕೂಲ್ ಟೀಚರ್ಗೆ ‘ಪ್ರೀತ್ಸೋದ್ ತಪ್ಪಾ? ಮೇಡಂ’ ಎಂದು ಲೋಕೇಶ್ ಬಸವಟ್ಟಿ ಪ್ರಶ್ನಿಸಿದ್ದರಂತೆ. ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಲೋಕೇಶ್ ಬಸವಟ್ಟಿ ಹಲವು ನಾಟಕಗಳಲ್ಲೂ ನಟಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾದಲ್ಲಿ ನಟಿಸುವ ಅವಕಾಶ ಲೋಕೇಶ್ ಬಸವಟ್ಟಿ ಅವರನ್ನ ಹುಡುಕಿಕೊಂಡು ಬಂದಿತ್ತು. ಆದರೆ, ಕಡೆ ಕ್ಷಣದಲ್ಲಿ ಆ ಅವಕಾಶ ಕೈತಪ್ಪಿ ಹೋಯ್ತು. ಇದರಿಂದ ಬಹಳ ಬೇಜಾರಾಯ್ತು ಎಂದು ಸಂದರ್ಶನದಲ್ಲಿ ಲೋಕೇಶ್ ಬಸವಟ್ಟಿ ಹೇಳಿದ್ದಾರೆ.