Prabhudeva: ಪುಟ್ಟ ಮಗಳು, ಪತ್ನಿ, ಕುಟುಂಬದ ಜೊತೆ ತಿರುಪತಿಗೆ ಬಂದ 'ಇಂಡಿಯನ್ ಮೈಕಲ್ ಜಾಕ್ಸನ್' ಪ್ರಭುದೇವ
1965 views
entertainment ವಿಡಿಯೋಗಳಿಗೆ ಚಂದಾದಾರರಾಗಿಖ್ಯಾತ ಕೊರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ ಅವರು ಈ ಬಾರಿ ಮಗಳು, ಪತ್ನಿ, ಅಪ್ಪ-ಅಮ್ಮನ ಜೊತೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಪ್ರಭುದೇವ ಅವರ ಎರಡನೇ ಪತ್ನಿ ಮುಂಬೈ ಮೂಲದ ಫಿಸಿಯೋಥೆರಪಿಸ್ಟ್ ಹಿಮಾನಿ ಸಿಂಗ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಪುಟ್ಟ ಮಗುವನ್ನು ಹಿಮಾನಿ ಅವರು ದೇಗುಲಕ್ಕೆ ಕರೆದುಕೊಂಡು ಬಂದಿದ್ದಾರೆ. ಇಡೀ ಕುಟುಂಬ ದೇವರ ದರ್ಶನ ಪಡೆದಿದೆ. ಪ್ರಭುದೇವ ಕುಟುಂಬದಲ್ಲಿ ಈ ಮಗು ಮೊದಲ ಹೆಣ್ಣು ಮಗು ಆಗಿದೆ. ಹೀಗಾಗಿ ಇಡೀ ಕುಟುಂಬ ಖುಷಿಯಿಂದ ಕುಣಿದಾಡಿದೆ. ಪ್ರಭುದೇವ ಅವರು 'ವೀಕೆಂಡ್ ವಿಥ್ ರಮೇಶ್ ಸೀಸನ್ 5' ಶೋಗೆ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಆ ನಂತರದಲ್ಲಿ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಕೂಡ ಆಗಮಿಸಿದ್ದರು. ಡಾ ಶಿವರಾಜ್ಕುಮಾರ್ ಅವರ ಜೊತೆ 'ಕರಟಕ ದಮನಕ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
Prabhudeva: 50ನೇ ವಯಸ್ಸಿಗೆ ಮತ್ತೆ ತಂದೆಯಾದ ಪ್ರಭುದೇವ; 'ಫ್ಯಾಮಿಲಿ ಜೊತೆ ಸಮಯ ಕಳೆಯುವೆ' ಎಂದ ನಟ
Prabhudeva: 50ನೇ ವಯಸ್ಸಿಗೆ ಮತ್ತೆ ತಂದೆಯಾದ ಪ್ರಭುದೇವ; 'ಫ್ಯಾಮಿಲಿ ಜೊತೆ ಸಮಯ ಕಳೆಯುವೆ' ಎಂದ ನಟ