'ದುನಿಯಾʼ ಸಿನಿಮಾಕ್ಕಿಂತ ನಾಲ್ಕು ಪಟ್ಟು ಜಾಸ್ತಿ ದುಡ್ಡನ್ನು 'ಟೋಬಿʼ ಮಾಡಿದ್ರೆ ನಂಗೆ ಖುಷಿ!
2437 views
entertainment ವಿಡಿಯೋಗಳಿಗೆ ಚಂದಾದಾರರಾಗಿರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು ಮುಂತಾದವರು ನಟಿಸಿರುವ 'ಟೋಬಿ' ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿತ್ತು. ಅದನ್ನು ನೋಡಿ ಎಲ್ರೂ ಬೆಂಕಿ, ರೋಮಾಂಚನ ಆಯ್ತು ಅಂತ ಹೇಳಿದ್ದರು. ಆಗಸ್ಟ್ 18ರಂದು 'ಟೋಬಿ' ಸಿನಿಮಾ ತೆರೆ ಕಾಣಲಿದೆ. ಈ ಚಿತ್ರದ ಕಥೆ ಶುರುವಾಗಿದ್ದು ಹೇಗೆ? ಈ ಸಿನಿಮಾ ಡೈಲಾಗ್, ತಾರಾಗಣದಲ್ಲಿ ಯಾರಿದ್ದಾರೆ? ಈ ಸಿನಿಮಾ ಶೂಟಿಂಗ್ ಅನುಭವ ಹೇಗಿತ್ತು? ಪಾತ್ರ ಹೇಗಿದೆ ಮುಂತಾದ ಪ್ರಶ್ನೆಗಳ ಬಗ್ಗೆ ರಾಜ್ ಬಿ ಶೆಟ್ಟಿ ಅವರು 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿದ್ದಾರೆ.ನಾಯಕ ನಟಿ ಚೈತ್ರಾ ಆಚಾರ್ ಕೂಡ ಈ ಸಿನಿಮಾಕ್ಕೆ ಆಯ್ಕೆ ಆಗಿದ್ದು ಹೇಗೆ ಎಂದು ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಚೈತ್ರಾ ನಟಿಸಿದ್ದು ಸೆಪ್ಟೆಂಬರ್ 1ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಈ ಎರಡೂ ಸಿನಿಮಾಗಳಲ್ಲಿ ಚೈತ್ರಾ ನಟಿಸಿದ್ದು ಕೆಲವೇ ಕೆಲವು ದಿನಗಳ ಅಂತರದಲ್ಲಿ ಈ ಸಿನಿಮಾಗಳು ರಿಲೀಸ್ ಆಗುವುದರ ಬಗ್ಗೆ ಕೂಡ ಚೈತ್ರಾ ಮಾತನಾಡಿದ್ದಾರೆ. ಚಿತ್ರರಂಗದಲ್ಲಿರುವ ಸಮಸ್ಯೆಗಳು, ಕತೆಗಳ ಆಯ್ಕೆ, ಬರವಣಿಗೆ ಆದ್ಯತೆ ಕೊಡಿದಿರುವುದು, ರಿಲೇಶನ್ಶಿಪ್ನಲ್ಲಿ ಬೇಕಾದ ಅಂಶಗಳ ಬಗ್ಗೆ ಕೂಡ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ.
Toby Movie: ರಾಜ್ ಬಿ ಶೆಟ್ಟಿ 'ಟೋಬಿ' ಹಿಟ್ ಆಗೋದು ಪಕ್ಕಾ ಅಂದ್ರು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ
Toby Movie: ರಾಜ್ ಬಿ ಶೆಟ್ಟಿ 'ಟೋಬಿ' ಹಿಟ್ ಆಗೋದು ಪಕ್ಕಾ ಅಂದ್ರು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ