'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಟ್ರೇಲರ್ ರಿಲೀಸ್; ನವಿರಾದ ಪ್ರೇಮಕಥೆಯೊಂದಿಗೆ ಬಂದ ರಕ್ಷಿತ್ ಶೆಟ್ಟಿ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟ್ರೇಲರ್ ಹಲವರ ಗಮನ ಸೆಳೆದಿದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ' ಸಿನಿಮಾಗಳ ನಂತರ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿ, ಎಲ್ಲರಿಗೂ ಇಷ್ಟವಾಗಿವೆ. ಸೆ.1ರಂದು ಈ ಸಿನಿಮಾವು ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರಿಗೆ ಇದು ತುಂಬ ಇಷ್ಟವಾಗಿದೆ. ಈ ಬಾರಿ ಒಂದು ಮನಸೂರೆಗೊಳ್ಳುವಂತಹ ಪ್ರೇಮಕಥೆಯನ್ನು ರಕ್ಷಿತ್ & ಹೇಮಂತ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸೆ.1ರಂದು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಪಾರ್ಟ್ 1 ತೆರೆಗೆ ಬರಲಿದೆ. ಅಕ್ಟೋಬರ್ 20ಕ್ಕೆ ಪಾರ್ಟ್ 2 ಬರಲಿದೆ. ಈ ಸಿನಿಮಾವನ್ನು ಎರಡು ಪಾರ್ಟ್ಗಳಲ್ಲಿ ರಿಲೀಸ್ ಮಾಡುತ್ತಿರುವುದೇಕೆ ಎಂಬ ವಿಚಾರದ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಮಾತನಾಡಿದ್ದಾರೆ.