Circus Tulu Movie: ರೂಪೇಶ್ ಶೆಟ್ಟಿಯ 'ಸರ್ಕಸ್' ನೋಡಲು ಬಂದ ಮಾಜಿ 'ಬಿಗ್ ಬಾಸ್' ಸ್ಪರ್ಧಿಗಳು
2214 views
entertainment ವಿಡಿಯೋಗಳಿಗೆ ಚಂದಾದಾರರಾಗಿ'ಬಿಗ್ ಬಾಸ್' ಶೋನ ಮಾಜಿ ಸ್ಪರ್ಧಿಗಳೆಲ್ಲ ಈಚೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ಅರವಿಂದ್ ಕೆಪಿ, ದಿವ್ಯಾ ಉರುಡುಗ, ಸಾನ್ಯಾ ಅಯ್ಯರ್, ನಂದು, ನವಾಜ್, ಜಯಶ್ರೀ ಆರಾಧ್ಯಾ, ರಾಕೇಶ್ ಅಡಿಗ, ಶೈನ್ ಶೆಟ್ಟಿ.. ಹೀಗೆ ಎಲ್ರೂ ಕೂಡ ಒಂದು ಕಡೆ ಸೇರಿದ್ದರು. ಇದಕ್ಕೆಲ್ಲ ಕಾರಣವಾಗಿದ್ದು ರೂಪೇಶ್ ಶೆಟ್ಟಿ! ವಿಷ್ಯ ಏನಪ್ಪ ಅಂದ್ರೆ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಸಿನಿಮಾ 'ಸರ್ಕಸ್' ಈಚೆಗೆ ತೆರೆಕಂಡಿತ್ತು. ಈ ಬಾರಿ 'ಸರ್ಕಸ್' ಸಿನಿಮಾದ ಸ್ಪೆಷಲ್ ಪ್ರೀಮಿಯರ್ ಶೋವನ್ನು ಬೆಂಗಳೂರಿನಲ್ಲಿ ಏರ್ಪಡಿಸಿದ್ರು ರೂಪೇಶ್ ಶೆಟ್ಟಿ. ಆ ಸಲುವಾಗಿ ತಮ್ಮ ಗೆಳೆಯನ ಸಿನಿಮಾಗೆ ಸಾಥ್ ನೀಡಲು ಬಿಗ್ ಬಾಸ್ನ ಮಾಜಿ ಸ್ಪರ್ಧಿಗಳು ಆಗಮಿಸಿದ್ದರು. ರೂಪೇಶ್ಗೆ ಶುಭಾಶಯಗಳನ್ನು ಕೋರಿದರು, ಚಿತ್ರ ಸೂಪರ್ ಹಿಟ್ ಆಗಲಿ ಅಂತ ಹಾರೈಸಿದ್ರು.ಅಂದಹಾಗೆ, 'ಸರ್ಕಸ್' ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆಗೆ ತುಳು ಚಿತ್ರರಂಗದ ಅನುಭವಿ ಕಲಾವಿದರಾದ ಅರವಿಂದ್ ಬೋಳಾರ್ ಮತ್ತು ನವಿನ್ ಡಿ ಪಡೀಲ್ ಕೂಡ ಬಣ್ಣ ಹಚ್ಚಿದ್ದಾರೆ. ಬಿಡುಗಡೆಗೂ ಮುನ್ನವೇ 'ಸರ್ಕಸ್' ಸಿನಿಮಾಕ್ಕೆ ದೇಶ ವಿದೇಶಗಳಲ್ಲಿ 51 ಪ್ರೀಮಿಯರ್ ಶೋಗಳನ್ನು ಮಾಡಿದ್ದು ವಿಶೇಷ. ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡ್ರೆ, ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.