ಮೊದಲ ಬಾರಿಗೆ ಮಗಳು ಸುಹಾನಾ ಜೊತೆ ಶಾರುಖ್ ಖಾನ್ ನಟನೆ; ಒಂದೇ ಚಿತ್ರದಲ್ಲಿ ತಂದೆ & ಮಗಳು
1194 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಮತ್ತು ಅವರ ಪುತ್ರಿ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸುಹಾನಾ ಖಾನ್ ತಮ್ಮ ತಂದೆಯೊಂದಿಗೆಯೇ ಮೊದಲ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಾರುಖ್ ಖಾನ್ ಮತ್ತು 'ಪಠಾಣ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಸದ್ಯ ಈ ಹೊಸ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಕಹಾನಿ ಸಿನಿಮಾ ಖ್ಯಾತಿಯ ಸುಜಯ್ ಘೋಷ್ ಇದರ ನಿರ್ದೇಶನ ಮಾಡುತ್ತಿದ್ದಾರೆ.ಸುಹಾನಾ ಖಾನ್ ಈಗಾಗಲೇ ‘ಆರ್ಚೀಸ್’ ಎಂಬ ಸಿನಿಮಾದಲ್ಲಿ ನಟಿಸಿದ್ದು, ಅದು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಹಾಗಾಗಿ, ತಂದೆ ಶಾರುಖ್ ಜೊತೆಗಿನ ಈ ಸಿನಿಮಾವೇ ಸುಹಾನಾ ಅವರ ಮೊದಲ ಥಿಯೇಟರ್ ಡೆಬ್ಯೂ ಚಿತ್ರವಾಗಲಿದೆ. ಇನ್ನೂ ಹೆಸರಿಡದ ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಈ ವರ್ಷಾಂತ್ಯಕ್ಕೆ ಸೆಟ್ಟೇರುವ ಸಾಧ್ಯತೆ ಇದೆ. ತಮ್ಮ ಪುತ್ರಿಯನ್ನು ಬಾಲಿವುಡ್ಗೆ ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಬೇಕು ಎಂದುಕೊಂಡಿದ್ದಾರೆ ಶಾರುಖ್ ಖಾನ್. ಹಾಗಾಗಿ ಈಗ ತಮ್ಮದೇ ಬ್ಯಾನರ್ನಲ್ಲಿ ಅವರನ್ನು ಪರಿಚಯಿಸಲು ನಿರ್ಧರಿಸಿದ್ದಾರೆ. ಅವರು ಈಗ ತಮ್ಮ ಕೈಯಲ್ಲಿರುವ ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಶೂಟಿಂಗ್ ಮುಗಿಸಿ ಈ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ.