Shahid Kapoor: 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣಗೆ ಸಿಕ್ತು ಮತ್ತೊಂದು ಬಂಪರ್ ಆಫರ್
1749 views
entertainment ವಿಡಿಯೋಗಳಿಗೆ ಚಂದಾದಾರರಾಗಿಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಹವಾ ಎಬ್ಬಿಸಿ ಆಗಿದೆ. ಅವರ ಮುಂದಿನ 'ಪುಷ್ಪ 2' ಸಿನಿಮಾದ ಮೇಲೆ ಎಲ್ಲರ ಕಣ್ಣು ಇದೆ. ಈ ಮಧ್ಯೆ ಬಾಲಿವುಡ್ನಲ್ಲೂ ರಶ್ಮಿಕಾ ಸಖತ್ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರ, ಅಮಿತಾಭ್ ಬಚ್ಚನ್ ಅವರ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. 'ಅನಿಮಲ್' ಸಿನಿಮಾದಲ್ಲಿ ರಣಬೀರ್ ಕಪೂರ್ಗೆ ನಾಯಕಿಯಾಗಿದ್ದಾರೆ. ಈಗ ಶಾಹಿದ್ ಕಪೂರ್ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅನೀಸ್ ಬಜ್ಮೀ ಅವರ ಮುಂದಿನ ಆಕ್ಷನ್ ಕಾಮಿಡಿ ಸಿನಿಮಾದಲ್ಲಿ ಶಾಹಿದ್ ಕಪೂರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲಿದ್ದಾರೆ ಎಂಬುದು ಸದ್ಯದ ಟಾಕ್. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಅವರು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತೆಲುಗು ನಿರ್ಮಾಪಕ 'ದಿಲ್' ರಾಜು ಮತ್ತು ಏಕ್ತಾ ಕಪೂರ್ ಹಣ ಹಾಕಲಿದ್ದಾರೆ. ಚಿತ್ರಕ್ಕೆ 'ರೌಡಿ ರಾಥೋಡ್ 2' ಎಂದು ಟೈಟಲ್ ಇಡುವ ಸಾಧ್ಯತೆ ಇದೆ.