ಯುಎಸ್ನಿಂದ ಫಿಟ್ ಅಂಡ್ ಫೈನ್ ಆಗಿ ಮುಂಬೈಗೆ ವಾಪಸ್ ಆದ ಶಾರುಖ್ ಖಾನ್
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಮುಂಬೈಗೆ ವಾಪಸ್ ಆಗಿದ್ದಾರೆ. ಯುಎಸ್ನಿಂದ ಮುಂಬೈಗೆ ಮರಳಿದ್ದಾರೆ. ಶೂಟಿಂಗ್ ನಿಮಿತ್ತ ಶಾರುಖ್ ಖಾನ್ ಯುಎಸ್ಗೆ ತೆರಳಿದ್ದರು. ಚಿತ್ರೀಕರಣದ ವೇಳೆ ಶಾರುಖ್ ಖಾನ್ಗೆ ಪೆಟ್ಟಾಗಿದ್ದು, ಮೂಗಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂಬ ಸುದ್ದಿ ಮಂಗಳವಾರ ಹಬ್ಬಿತ್ತು. ಆದರೆ, ಬುಧವಾರ ಬೆಳಗಿನ ಜಾವ ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಶಾರುಖ್ ಖಾನ್ ಫಿಟ್ ಅಂಡ್ ಫೈನ್ ಆಗಿ ಕಂಡುಬಂದಿದ್ದಾರೆ. ಆರೋಗ್ಯವಾಗಿ ಶಾರುಖ್ ಖಾನ್ ಖಾನ್ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಸ್ವೀಟ್ ಸರ್ಪ್ರೈಸ್ ಸಿಕ್ಕಂತಾಗಿದೆ. ಮುಂಬೈ ಏರ್ಪೋರ್ಟ್ನಲ್ಲಿ ಕ್ಯಾಮರಾ ಕಣ್ಣುಗಳಿಗೆ ಸೆರೆಸಿಕ್ಕ ಶಾರುಖ್ ಖಾನ್ ನೀಲಿ ಬಣ್ಣದ ಸ್ವೆಟ್ ಶರ್ಟ್, ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದರು. ಶಸ್ತ್ರಚಿಕಿತ್ಸೆಯ ಯಾವುದೇ ಕುರುಹು ಶಾರುಖ್ ಖಾನ್ ಅವರ ಮೊಗದಲ್ಲಿ ಕಾಣಿಸಲಿಲ್ಲ. ಹೀಗಾಗಿ, ಮೂಗಿನ ಶಸ್ತ್ರಚಿಕಿತ್ಸೆ ಸುದ್ದಿ ಸುಳ್ಳಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. ಅಂದ್ಹಾಗೆ, ಶಾರುಖ್ ಖಾನ್ ಅವರನ್ನ ರಿಸೀವ್ ಮಾಡಲು ಪತ್ನಿ ಗೌರಿ ಖಾನ್ ಮತ್ತು ಪುತ್ರ ಅಬ್ರಂ ಖಾನ್ ಏರ್ಪೋರ್ಟ್ಗೆ ಬಂದಿದ್ದರು. ತಮ್ಮ ಕಾರಿನಲ್ಲಿ ಶಾರುಖ್ ಖಾನ್ ಮನ್ನತ್ ತಲುಪಿದರು.