ಶಾರುಖ್ ಖಾನ್ 'ಜವಾನ್' ಸಿನಿಮಾ ರಿಲೀಸ್, ಮುಗಿಲುಮುಟ್ಟಿದ ಅಭಿಮಾನಿಗಳ ಹರ್ಷ
1928 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸಂಜಯ್ ದತ್ ನಟನೆಯ 'ಜವಾನ್' ಸಿನಿಮಾ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ನಿರ್ದೇಶಕ ಅಟ್ಲೀ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಲುಕ್ ನೋಡಿ ವೀಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಶಾರುಖ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಬಾಂಡಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಒಮ್ಮೆ ಸೇನಾಧಿಕಾರಿಯಾಗಿ, ಪೊಲೀಸ್ ಅಧಿಕಾರಿಯಾಗಿಯೂ ಈ ಚಿತ್ರದಲ್ಲಿ ಅವರು ನಟಿಸಿದ್ದಾರೆ.ಈ ಚಿತ್ರಕ್ಕೆ ಗೌರಿ ಖಾನ್ ಅವರು ಹಣ ಹೂಡಿದ್ದಾರೆ. ಅನಿರುದ್ಧ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾ ನೋಡಿದವರು ಬ್ಲಾಕ್ ಬಸ್ಟರ್ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ 2023ರಲ್ಲಿ 'ಪಠಾಣ್', 'ಜವಾನ್' ಚಿತ್ರಗಳ ಮೂಲಕ ಶಾರುಖ್ ದೊಡ್ಡ ಸೂಪರ್ ಹಿಟ್ ಚಿತ್ರ ನೀಡಿದ ಹಾಗೆ ಆಯ್ತು.
Jawan Movie Review: ಮಸಾಲಾ ಎಂಟರ್ಟೇನರ್ ಸಿನಿಮಾ ಕೊಟ್ಟ ಶಾರುಖ್ ಖಾನ್!
Jawan Movie Review: ಮಸಾಲಾ ಎಂಟರ್ಟೇನರ್ ಸಿನಿಮಾ ಕೊಟ್ಟ ಶಾರುಖ್ ಖಾನ್!