ಗಣಪತಿ ವಿಸರ್ಜನೆ ವೇಳೆಯೂ ಮುಖ ಮುಚ್ಚಿಕೊಂಡು ಕುಣಿದ ರಾಜ್ ಕುಂದ್ರಾ
34757 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಗಣೇಶ ಹಬ್ಬ ಅದ್ಧೂರಿಯಾಗಿ ಜರುಗಿತು. ಶಿಲ್ಪಾ ಶೆಟ್ಟಿ ನಿವಾಸದಲ್ಲಿ ಗಣಪತಿಯ ದರ್ಶನ ಮಾಡಲು ಬಾಲಿವುಡ್ ತಾರೆಯರು ಆಗಮಿಸಿದ್ದರು. ರಿತೇಶ್ ದೇಶಮುಖ್ - ಜೆನಿಲಿಯಾ ಫ್ಯಾಮಿಲಿ, ನಟ ಗೋವಿಂದಾ ಕುಟುಂಬಸ್ಥರು ಶಿಲ್ಪಾ ಶೆಟ್ಟಿ ಮನೆಗೆ ಭೇಟಿ ಕೊಟ್ಟು ಗಣಪತಿಗೆ ನಮಿಸಿದರು. ಶ್ರದ್ಧಾ ಭಕ್ತಿಯಿಂದ ಗಣಪತಿಗೆ ಶಿಲ್ಪಾ ಶೆಟ್ಟಿ ಫ್ಯಾಮಿಲಿ ಪೂಜೆ ಸಲ್ಲಿಸಿದರು. ಬಳಿಕ ಗಣಪತಿಯನ್ನ ಗ್ರ್ಯಾಂಡ್ ಆಗಿ ಶಿಲ್ಪಾ ಶೆಟ್ಟಿ ಬೀಳ್ಕೊಟ್ಟರು. ಗಣಪತಿ ವಿಸರ್ಜನೆ ವೇಳೆ ಮರಾಠಿ ಮುಲ್ಗಿಯಂತೆ ತಯಾರಾಗಿದ್ದ ಶಿಲ್ಪಾ ಶೆಟ್ಟಿ, ತಮ್ಮ ಸಹೋದರಿ ಶಮಿತಾ ಶೆಟ್ಟಿ ಹಾಗೂ ಕುಟುಂಬಸ್ಥರ ಜೊತೆಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಪತಿ ರಾಜ್ ಕುಂದ್ರಾ ಮುಖ ಮುಚ್ಚಿಕೊಂಡೇ ಡ್ಯಾನ್ಸ್ ಮಾಡಿದರು. ಪೂಜೆ ಸಲ್ಲಿಸಿ ಗಣಪತಿಯನ್ನ ಶಿಲ್ಪಾ ಶೆಟ್ಟಿ ವಿಸರ್ಜಿಸಿದರು.