ಫ್ಯಾಮಿಲಿ ಜೊತೆ ನಿಲ್ಲದೆ ಸೀದಾ ಹೊರಟ ರಾಜ್ ಕುಂದ್ರಾ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಸಿಲುಕಿದ್ದರು. ಪ್ರಕರಣದಲ್ಲಿ ಸಿಲುಕಿದ್ಮೇಲೆ ರಾಜ್ ಕುಂದ್ರಾ ಮತ್ತು ಕುಟುಂಬಸ್ಥರು ಮುಜುಗರಕ್ಕೀಡಾಗಿದ್ದರು. ಅಂದಿನಿಂದ ರಾಜ್ ಕುಂದ್ರಾ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗೆಲ್ಲಾ ಮುಖಕ್ಕೆ ಮಾಸ್ಕ್ ಅಥವಾ ಫೇಸ್ ಶೀಲ್ಡ್ ಧರಿಸುವ ರಾಜ್ ಕುಂದ್ರಾ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿಲ್ಲ. ಕ್ಯಾಮರಾ ಕಣ್ಣುಗಳಿಗೆ ಪೋಸ್ ಕೊಡುತ್ತಿಲ್ಲ. ಇತ್ತೀಚೆಗಷ್ಟೇ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ವೀಕ್ಷಿಸಲು ಕುಟುಂಬ ಸಮೇತ ರಾಜ್ ಕುಂದ್ರಾ ಪಿವಿಆರ್ ಜುಹುಗೆ ಆಗಮಿಸಿದ್ದರು. ‘ರಾಜ್ ಸರ್ ನಿಲ್ಲಿ.. ನಿಲ್ಲಿ..’ ಎಂದರೂ ನಿಲ್ಲದ ರಾಜ್ ಕುಂದ್ರಾ ಸೀದಾ ಥಿಯೇಟರ್ ಒಳಗೆ ಹೊರಟುಬಿಟ್ಟರು. ಇನ್ನೂ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆಗೆ ಶಿಲ್ಪಾ ಶೆಟ್ಟಿ ಆಗಮಿಸಿದರು.