'ನಾಗಾಭರಣ ಅವ್ರ ಮಹಾಮಾಯಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕಿತ್ತು.. ಆದ್ರೆ ನಟಿಸಲಾಗಲಿಲ್ಲ..'- ಪ್ರಭಂಜನ ದೇಶಪಾಂಡೆ
3667 views
entertainment ವಿಡಿಯೋಗಳಿಗೆ ಚಂದಾದಾರರಾಗಿನಟ ಪ್ರಭಂಜನ ದೇಶಪಾಂಡೆ ಅವರು ಈ ಹಿಂದೆ 'ಶ್ರೀ ಜಗನ್ನಾಥ ದಾಸರು' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾವು ಅದ್ಭುತ ಗೆಲುವನ್ನು ಪಡೆದುಕೊಂಡಿತ್ತು. ಜಗನ್ನಾಥ ದಾಸರ ಪಾತ್ರದಲ್ಲಿ ಪ್ರಭಂಜನ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಆನಂತರ ಅದೇ ತಂಡ ಸೇರಿಕೊಂಡು 'ಶ್ರೀ ಪ್ರಸನ್ನ ವೆಂಕಟ ದಾಸರು' ಎಂಬ ಮತ್ತೊಂದು ಚಿತ್ರವನ್ನು ರಿಲೀಸ್ ಮಾಡಿದೆ. ಪ್ರಸ್ತುತ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾದಲ್ಲೂ ವೆಂಕಟ ದಾಸರ ಪಾತ್ರವನ್ನು ಪ್ರಭಂಜನ ದೇಶಪಾಂಡೆ ನಿಭಾಯಿಸಿದ್ದಾರೆ. ಮಧುಸೂದನ ಹವಾಲ್ದಾರ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಪ್ರಭಂಜನ ದೇಶಪಾಂಡೆ ಅವರು 'ವಿಜಯ ಕರ್ನಾಟಕ' ವೆಬ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಕಂಠದಾನ ಕಲಾವಿದರಾಗಿ ಬಣ್ಣದ ಲೋಕಕ್ಕೆ ಬಂದ ಪ್ರಭಂಜನ ಅವರು ಈಗ 'ಶ್ರೀ ಜಗನ್ನಾಥ ದಾಸರು', 'ಶ್ರೀ ಪ್ರಸನ್ನ ವೆಂಕಟ ದಾಸರು' ಸಿನಿಮಾಗಳಲ್ಲಿ ನಟಿಸಿದ್ದು, ನಾಲ್ಕಾರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ.