ಬಾಲಿವುಡ್ನ ಹಳೆಯ ದಾಖಲೆಗಳೆಲ್ಲ 'ಗದರ್ 2' ಎದುರು ಉಡೀಸ್; ಸನ್ನಿ ಡಿಯೋಲ್ಗೆ ಸಿಕ್ತು ಭರ್ಜರಿ ಸಕ್ಸಸ್
1187 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಹಲವು ಸಮಯದಿಂದ ಒಂದು ದೊಡ್ಡ ಸಕ್ಸಸ್ಗಾಗಿ ಕಾದು ಕುಳಿತಿದ್ದರು. ಅದೀಗ 'ಗದರ್ 2' ಸಿನಿಮಾದಲ್ಲಿ ರೂಪದಲ್ಲಿ ಸಿಕ್ಕಿದೆ. ಸನ್ನಿ ಡಿಯೋಲ್ಗೆ ಈಗ 66 ವರ್ಷ ವಯಸ್ಸು. ಸನ್ನಿಯ ಇಡೀ ವೃತ್ತಿ ಬದುಕಿನಲ್ಲಿ ಸಿಗದಂತಹ ಸಕ್ಸಸ್ ಈಗ ಗದರ್ 2 ಚಿತ್ರದಿಂದ ಸಿಕ್ಕಿದೆ. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾವು ಅಕ್ಷರಶಃ ಸುನಾಮಿ ಎಬ್ಬಿಸಿದೆ. 'ಗದರ್ 2' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿ ಬಾಲಿವುಡ್ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. 'ಗದರ್ 2' ಸಿನಿಮಾದ ಎದುರು ತೆರೆಕಂಡಿದ್ದ ಅಕ್ಷಯ್ ಕುಮಾರ್ ಅವರ 'OMG 2' ಸಿನಿಮಾದ ಕಲೆಕ್ಷನ್ ಕೂಡ ಡಲ್ ಹೊಡೆದಿದೆ. 'ಗದರ್ 2' ಚಿತ್ರದ ಅರ್ಧದಷ್ಟು ಕಲೆಕ್ಷನ್ ಕೂಡ ಅಕ್ಷಯ್ ಕುಮಾರ್ ಸಿನಿಮಾ ಮಾಡಿಲ್ಲ! 'ಗದರ್ 2' ಸಿನಿಮಾವು ಸುಮಾರು 70-80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ತೆರೆಕಂಡ ಮೊದಲ ದಿನವೇ ಈ ಸಿನಿಮಾವು 40.10 ಕೋಟಿ ರೂಪಾಯಿ ಗಳಿಸಿತ್ತು. ಎರಡೇ ದಿನ 43.08 ಕೋಟಿ ರೂಪಾಯಿ ಗಳಿಕೆ ಆಗಿತ್ತು. ಇನ್ನು, ಭಾನುವಾರ ರಜೆ ದಿನವಾಗಿರುವುದರಿಂದ ಮೊದಲ ವಾರಾಂತ್ಯಕ್ಕೆ 'ಗದರ್ 2' ಗಳಿಕೆ 130 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇತ್ತು. ಅದು ಕೂಡ ಈಗ ನಿಜವಾಗಿದೆ. ಭಾರತದಲ್ಲಿ ಭಾನುವಾರ ಈ ಸಿನಿಮಾವು 51+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಮೊದಲ ಮೂರು ದಿನದಕ್ಕೆ ಭಾರತದಲ್ಲಿ ಈ ಸಿನಿಮಾವು 135 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿನ ದಾಖಲೆಗಳನ್ನೆಲ್ಲ ಬ್ರೇಕ್ ಮಾಡಿ ಗದರ್ 2 ಮುಂದೆ ಸಾಗುತ್ತಿದೆ. ತೆರೆಕಂಡ ದಿನದಿಂದಲೂ ಗಳಿಕೆಯಲ್ಲಿ ಏರಿಕೆ ಆಗುತ್ತಿದೆಯೇ ವಿನಃ ಕಡಿಮೆ ಆಗುತ್ತಿಲ್ಲ. ಅಷ್ಟೇನೂ ನಿರೀಕ್ಷೆ ಹುಟ್ಟಿಸಿರದ 'ಗದರ್ 2'ಗೆ ಈ ಪ್ರಮಾಣದ ಕಲೆಕ್ಷನ್ ಆಗಿದ್ದರ ಬಗ್ಗೆ ಎಲ್ಲರಲ್ಲೂ ಆಶ್ಚರ್ಯ ಇದೆ. ಅಂದಹಾಗೆ, 2001ರಲ್ಲಿ 'ಗದರ್' ಸಿನಿಮಾವನ್ನು ನಿರ್ದೇಶಿಸಿದ್ದ ಅನಿಲ್ ಶರ್ಮಾ ಅವರೇ ಈಗ 'ಗದರ್ 2' ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ.