'ದಳಪತಿ' ವಿಜಯ್ ನಟನೆಯ ಬಹುನಿರೀಕ್ಷಿತ 'ಲಿಯೋ' ರಿಲೀಸ್; ಬೆಂಗಳೂರಿನಲ್ಲಿ ಹೇಗಿತ್ತು ರೆಸ್ಪಾನ್ಸ್?
1483 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ದಳಪತಿ' ವಿಜಯ್ ಅಭಿನಯದ 'ಲಿಯೋ' ಸಿನಿಮಾದ ಮೇಲೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಕಾರಣ, 'ಮಾಸ್ಟರ್' ಸಿನಿಮಾದ ಬಳಿಕ ನಟ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಅಲ್ಲದೆ, ಇದು 'ಲೋಕೇಶ್ ಸಿನಿಮ್ಯಾಟಿಕ್ ಯುನಿವರ್ಸ್' ಅಡಿಯಲ್ಲಿ ಮೂಡಿಬಂದಿದೆಯಾ ಎಂಬ ಕುತೂಹಲ ಕೂಡ ಇದೆ. ಅಂದಹಾಗೆ, ಈ ಸಿನಿಮಾಗೆ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಶೋಗಳು ಸಿಕ್ಕಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಇದರ ಟಿಕೆಟ್ ದರಗಳು 2 ಸಾವಿರ ರೂಪಾಯಿ ದಾಟಿರುವುದು ಕೂಡ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು, ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ತ್ರಿಷಾ, ಸಂಜಯ್ ದತ್, ಅರ್ಜುನ್ ಸರ್ಜಾ, ಮನ್ಸೂರ್ ಅಲಿ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ತೆರೆಗೆ ಬಂದಿರುವ 'ಲಿಯೋ' ಸಿನಿಮಾಗೆ ಹೇಗಿದೆ ರೆಸ್ಪಾನ್ಸ್? ಬೆಂಗಳೂರಿನ ಪ್ರೇಕ್ಷಕರು ಈ ಸಿನಿಮಾ ನೋಡಿ ಏನಂದ್ರು ಎಂಬುದರ ಕುರಿತ ವಿಡಿಯೋ ಇಲ್ಲಿದೆ.