Rewind 2023 : ಈ ವರ್ಷ ಡಿವೋರ್ಸ್ ಪಡೆದು ಸಂಗಾತಿಯಿಂದ ದೂರಾದ ತಾರೆಯರು ಇವರೇ!
1629 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ2023ರ ಅಂತ್ಯದಲ್ಲಿ ನಾವಿದ್ದೇವೆ. ಎಷ್ಟು ಬೇಗ 2023 ಮುಗೀತಲ್ವಾ ಅಂತ ನಿಮಗೆಲ್ಲಾ ಅನಿಸುತ್ತಿದೆ ಅಲ್ವಾ? 2024.. ಅಂದ್ರೆ ಹೊಸ ವರ್ಷವನ್ನ ಹೊಸ ಹರ್ಷದಿಂದ ಬರಮಾಡಿಕೊಳ್ಳಲು ನೀವೆಲ್ಲಾ ಪ್ಲಾನ್ಗಳನ್ನ ಮಾಡುತ್ತಲೇ ಇರುತ್ತೀರಾ… ಹೊಸ ವರ್ಷವನ್ನ ಭರ್ಜರಿಯಾಗಿ ಸ್ವಾಗತ ಮಾಡುವ ಮುನ್ನ 2023ರತ್ತ ಒಮ್ಮೆ ಕಣ್ಣಾಡಿಸೋಣ.. 2023ರನ್ನ ರಿವೈಂಡ್ ಮಾಡಿ ಒಮ್ಮೆ ಫ್ಲ್ಯಾಶ್ ಬ್ಯಾಕ್ಗೆ ಹೋಗಿ ಬರೋಣ..ಈ ವರ್ಷ ಯಾವೆಲ್ಲಾ ತಾರೆಯರು ವಿಚ್ಛೇದನ ಪಡೆದರು ಅಂತ ಗೊತ್ತಾ? ಯಾವೆಲ್ಲಾ ಸ್ಟಾರ್ಗಳು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು ಎಂಬ ಪಟ್ಟಿ ಇಲ್ಲಿದೆ ನೋಡಿ..ಮೊದಲನೇಯದಾಗಿ ತೆಲುಗಿನ ಮೆಗಾ ಸ್ಟಾರ್ ಫ್ಯಾಮಿಲಿಯ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಈ ವರ್ಷ ವಿಚ್ಛೇದನ ಪಡೆದರು. ಮದುವೆಯಾಗಿ ಮೂರು ವರ್ಷ ತುಂಬುವುದರೊಳಗೆ ನಿಹಾರಿಕಾ ಕೊನಿಡೆಲಾ - ಚೈತನ್ಯ ಜೊನ್ನಲಗಡ್ಡ ಅವರ ದಾಂಪತ್ಯ ಜೀವನ ಮುರಿದುಬಿತ್ತು. ಅಸಲಿಗೆ, 2020ರ ಡಿಸೆಂಬರ್ ತಿಂಗಳಿನಲ್ಲಿ ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿತ್ತು. ಮದುವೆಯಾದ ನಂತರ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರಿಬ್ಬರು ಈ ವರ್ಷ ವಿಚ್ಛೇದನ ಪಡೆದರು. ಮೆಗಾ ಫ್ಯಾಮಿಲಿಯ ಅಭಿಮಾನಿಗಳಿಗೆ ಈ ವಿಚಾರ ಬೇಸರ ಮೂಡಿಸಿತು. ‘ಬಿಗ್ ಬಾಸ್ ಕನ್ನಡ 4’ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಈ ವರ್ಷ ವಿಚ್ಛೇದನ ಪಡೆದರು. ಅರ್ಪಿತಾ ಅವರನ್ನ ಕಿರಿಕ್ ಕೀರ್ತಿ ಮದುವೆಯಾಗಿದ್ದರು. ಈ ದಂಪತಿಗೆ ಆವಿಷ್ಕಾರ್ ಎಂಬ ಮಗನಿದ್ದಾನೆ. ರಿಯಾಲಿಟಿ ಶೋನಲ್ಲೂ ಈ ದಂಪತಿ ಸ್ಪರ್ಧಿಸಿದ್ದರು. ಕಾರಣಾಂತರಗಳಿಂದ ಇವರಿಬ್ಬರು 2023ರಲ್ಲಿ ದೂರಾದರು. ‘ಬಿಗ್ ಬಾಸ್ ಕನ್ನಡ 7’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ನಿರೂಪಕಿ ಚೈತ್ರಾ ವಾಸುದೇವನ್ ಕೂಡ ಈ ವರ್ಷವೇ ವಿಚ್ಛೇದನ ಪಡೆದರು. ಪ್ರೊಡಕ್ಷನ್ ಹೌಸ್ ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೊಂದಿರುವ ಚೈತ್ರಾ ವಾಸುದೇವನ್ 2017ರಲ್ಲಿ ಸತ್ಯ ಎಂಬುವರನ್ನ ಮದುವೆಯಾಗಿದ್ದರು. ಇವರಿಬ್ಬರ ಮದುವೆ ಗ್ರ್ಯಾಂಡ್ ಆಗಿ ನಡೆದಿತ್ತು. ತಮ್ಮ 6 ವರ್ಷಗಳ ದಾಂಪತ್ಯ ಜೀವನಕ್ಕೆ ಈ ವರ್ಷ ಚೈತ್ರಾ ವಾಸುದೇವನ್ ಅಂತ್ಯ ಹಾಡಿದರು. ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದ ಜಾಹ್ನವಿ ಕೂಡ ಇದೇ ವರ್ಷ ಪತಿಯಿಂದ ದೂರಾದರು. ಹಾಗ್ನೋಡಿದ್ರೆ, ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಜಾಹ್ನವಿ ಹಾಗೂ ಪುತ್ರನೊಂದಿಗೆ ಪತಿ ಕೂಡ ಭಾಗವಹಿಸಿದ್ದರು. ಆದ್ರೀಗ ಪತಿ ಪತ್ನಿ ದೂರಾಗಿದ್ದಾರೆ.