ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ತೆರಳಿದ ಪಿಎಂ ಮೋದಿ!
1329 views
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ 6 ವಿಕೆಟ್ಗಳಿಂದ ಸೋಲು ಅನುಭವಿಸಿತು. ಟೀಮ್ ಇಂಡಿಯಾದ ಮೂರನೇ ಏಕದಿನ ವಿಶ್ವಕಪ್ ಕನಸು ಭಗ್ನವಾಯಿತು. ಫೈನಲ್ ಪಂದ್ಯ ವೀಕ್ಷಿಸಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ತೆರಳಿ ಸೋಲಿನ ಬೇಸರದಲ್ಲಿ ಆಟಗಾರರಿಗೆ ಸಾಂತ್ವಾನ ಹೇಳಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊಹಮ್ಮದ್ ಶಮಿಯನ್ನು ಅಪ್ಪಿ,ಕೊಂಡ ಮೋದಿ, ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹಸ್ತಲಾಘವ ಮಾಡಿದರು.